ದಲಿತ ಸಿಎಂ ವಿಚಾರ: ಕಾಂಗ್ರೆಸ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್. ರಾಮನಗರ,ಜೂನ್,29,2021(..):ದಲಿತ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಈ ಕುರಿತು ರಾಮನಗರದಲ್ಲಿ ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಅವಕಾಶ ಸಿಕ್ಕಾಗಲೇ ಅವರು ದಲಿತರನ್ನ ಸಿಎಂ ಮಾಡಲಿಲ್ಲ. 2008ರಲ್ಲಿ ನಾನೇ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಮಾಡಿದ್ದೆ. ಬೇಷರತ್ ಬೆಂಬಲ ಕೊಡ್ತೇವೆ ಎಂದ್ರು ಮಾಡಿರಲಿಲ್ಲ. ಕಾಂಗ್ರೆಸ್ ನಲ್ಲಿ ವಲಸಿಗರು ಮೂಲ ಕಾಂಗ್ರೆಸ್ ಎಂದು ಚರ್ಚೆ ನಡೆಯುತ್ತಿದೆ ಎಂದು ಟೀಕಿಸಿದರು. ನಾಡಿನ ವಿಚಾರದಲ್ಲಿ ಜನಪ್ರತಿನಿಧಿಗಳಿಗೆ ನಿರ್ಲಿಪ್ತ ಭಾವನೆ ಇದೆ. ಇದು ರಾಜ್ಯಕ್ಕೆ ಮಾರಕವಾಗಿದೆ. ಜನರ ಸಮಸ್ಯೆ ಬಗ್ಗೆ ರಾಷ್ಟ್ರೀಯ ಪಕ್ಷಗಳಿಗೆ ಕಾಳಜಿ ಇಲ್ಲ. ಕಾಸರಗೂಡು ವಿಚಾರದಲ್ಲಿ ಕಾಂಗ್ರೆಸ್ ಚಕಾರವೆತ್ತಲಿಲ್ಲ. ತಮಿಳುನಾಡಿನಲ್ಲಿ ನೀರಿನ ವಿಚಾರ ಬಂದಾಗ ಎಲ್ಲಾ ಪಕ್ಷಗಳು ಒಟ್ಟಾಗುತ್ತಾರೆ. ಅವರ ಒಗ್ಗಟ್ಟು ನಮ್ಮಲ್ಲಿ ಇರಲ್ಲ. ನಾಡಿನ ಗಡಿ ಭಾಷೆ, ಜಲದ ಹಕ್ಕು ಪಡೆಯಲು ಬಲ ಬೇಕು ಪ್ರಾದೇಶಿಕ ಪಕ್ಷಕ್ಕೆ ಶಕ್ತಿ ನೀಡಬೇಕು ಎಂದು ಹೆಚ್.ಡಿಕೆ ಹೇಳಿದರು. : - - - - – .