ಪ್ಯಾಕೇಜ್ ಗಳು ಕೇವಲ ಜಾಹೀರಾತಿಗೆ ಸೀಮಿತ: ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡಿದ್ರೆ ದರಿದ್ರ ಬರಲ್ಲ- ಸರ್ಕಾರದ ವಿರುದ್ಧ ಹೆಚ್.ಡಿಕೆ ವಾಗ್ದಾಳಿ. ಬೆಂಗಳೂರ,ಜೂನ್,27,2021(..): ಸರ್ಕಾರದಪ್ಯಾಕೇಜ್ ಗಳು ಕೇವಲ ಜಾಹೀರಾತಿಗೆ ಸೀಮಿತವಾಗಿದೆ.ಪರಿಹಾರ ಧನ ಕೊಡುವ ಉದಾರತೆ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಆನೇಕಲ್ ನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಪ್ರತಿ ಕುಟುಂಬಕ್ಕೆ 10 ಸಾವಿರ ರೂಪಾಯಿ ಕೊಟ್ಟರೆ ದರಿದ್ರ ಬರಲ್ಲ. ಜನಸಾಮಾನ್ಯರು ಹಣವನ್ನು ಮತ್ತೆ ನಿಮಗೆ ಕೊಡುತ್ತಾರೆ ಎಂದು ಹೇಳಿದರು. ಕೆರೆಗಳನ್ನು ಉಳಿಸಬೇಕು ಎಂದು ಸಿಎಂ ಬಿಎಸ್ ವೈ ಟ್ವಿಟ್ ಬಗ್ಗೆ ಲೇವಡಿ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿಯವರು ನೂರಾರು ಕೆರೆ ನುಂಗಿ ನೀರು ಕುಡಿದಿದ್ದಾರೆ. ಮುಖ್ಯಮಂತ್ರಿಗಳ ಟ್ವೀಟ್ ನೋಡಿ ನನಗೆ ನಗು ಬರುತ್ತದೆ. ಕೆಂಪೇಗೌಡರ ಹೆಸರಿನಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಕೆರೆ ನುಂಗಿ ನೀರು ನೀರು ಕುಡಿದವರೆ ಕೆರೆ ಉಳಿಸಲು ಟ್ವೀಟ್ ಮಾಡಿದ್ದಾರೆ ಎಂದು ಟೀಕಿಸಿದರು. : - –- - -.