ಒಂದು ಪಂದ್ಯದಿಂದ ಅತ್ಯುತ್ತಮ ಟೆಸ್ಟ್ ತಂಡವನ್ನು ನಿರ್ಧರಿಸುವ ವಿಧಾನ ಸರಿಯಲ್ಲ ಎಂದ ಕೊಹ್ಲಿ ಬೆಂಗಳೂರು, ಜೂನ್ 25, 2021 (..):ಅತ್ಯುತ್ತಮ ಟೆಸ್ಟ್ ತಂಡವನ್ನು ಕನಿಷ್ಠ 3 ಪಂದ್ಯಗಳಿಂದ ನಿರ್ಧರಿಸಬೇಕು ಎಂದಿದ್ದಾರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಒಂದೇ ಪಂದ್ಯದಲ್ಲಿ ನಿಜವಾದ ಉತ್ತಮ ತಂಡವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಅನುಭವಿಸಿತು. ಈ ಸೋಲಿನ ಬಳಿಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ನಲ್ಲಿ ಮೂರು ಪಂದ್ಯಗಳಿರಬೇಕು ಎಂದು ಹೇಳಿದ್ದರು.