ತಂದೆ ತಾಯಿ ಸಾವಿನಿಂದ ನೊಂದ ಮಗ ಆತ್ಮಹತ್ಯೆಗೆ ಶರಣು. ಮೈಸೂರು,ಜೂನ್,25,2021(..):ತಂದೆ ತಾಯಿ ಸಾವಿನಿಂದ ನೊಂದ ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಗಾಂಧಿನಗರ ನಿವಾಸಿ ಎಸ್. ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಾರ್ತಿಕ್ ತಂದೆ ಕಳೆದ 8 ವರ್ಷಗಳ ಹಿಂದೆ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ತಂದೆ ತಾಯಿ ಕಳೆದುಕೊಂಡು ಕಾರ್ತಿಕ್ ವೇದನೆ ಅನುಭವಿಸುತ್ತಿದ್ದ. ತಂದೆ ಹಾಗೂ ತಾಯಿ ಸಾವಿಗೀಡಾದ ದಿನವೇ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಬದುಕುಳಿದಿದ್ದ. ಈ ಮಧ್ಯೆ ತನ್ನ ಹುಟ್ಟುಹಬ್ಬದ ದಿನವೇ ಶ್ರೀರಂಗಪಟ್ಟಣ ಸಮೀಪ ಪಶ್ಚಿಮ ವಾಹಿನಿಯ ಕಾವೇರಿ ದಡದ ಬಳಿ ವಿಷ ಸೇವಿಸಿ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನಿಂದ ಏನಾದ್ರು ತಪ್ಪಾಗಿದ್ರೆ ಕ್ಷಮಿಸಿ ಎಂದು ಸ್ನೇಹಿತರಿಗೆ ಡೆತ್ ನೋಟ್ ಬರೆದಿಟ್ಟು ಕಾರ್ತಿಕ್ ಸೂಸೈಡ್ ಮಾಡಿಕೊಂಡಿದ್ದಾನೆ. ಈ ಕುರಿತು ಶ್ರೀರಂಗಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - –-- .