ಲಾಕ್ ಡೌನ್ ನಂತರ ಮತ್ತೊಂದು ಹೊಸ ಸಿನಿಮಾ ಓಕೆ ಎಂದ ನಿಖಿಲ್ ಬೆಂಗಳೂರು, ಜೂನ್ 25, 2021 (..):ನಟ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಹಿಂದೆ ನಟಿಸುತ್ತಿದ್ದ ರೈಡರ್ ಶೂಟಿಂಗ್​ ಕಂಪ್ಲೀಟ್ ಆಗೋಕ್ಕು ಮುನ್ನವೇ ಮತ್ತೊಂದು ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ. ಬಿಡದಿಯ ತಮ್ಮ ಫಾರ್ಮ್​ಹೌಸ್​ನಲ್ಲಿಯೇ ಕಾಲ ಕಳೆಯುತ್ತಿದ್ದ ನಿಖಿಲ್ ಈಗ ಲಾಕ್ ಡೌನ್ ಗೆ ಬ್ರೇಕ್ ಬೀಳುತ್ತಿದ್ದಂತೆ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು ರೆಡಿಯಾಗಿದ್ದಾರೆ. ಕೆವಿಎನ್​ ಪ್ರೊಡಕ್ಷನ್​ ನಂಬರ್ 3 ಹೆಸರಿನಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಭರಾಟೆ ಮತ್ತು ಬೈಟು ಲವ್​ ನಿರ್ಮಾಣ ಮಾಡಿದ್ದ ಸುಪ್ರಿತ್​ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.