ಕೆಜಿಎಫ್ 2 ಬಿಡುಗಡೆ ಥಿಯೇಟರ್’ನಲ್ಲಾ ? ಅಥವಾ ಅಮೆಜಾನ್ ಪ್ರೈಂನಲ್ಲಾ?! ಬೆಂಗಳೂರು, ಜೂನ್ 24, 2021 (..):ಬಹುನಿರೀಕ್ಷೆಯ ಕೆಜಿಎಫ್ 2 ಬಿಡುಗಡೆ ದಿನಾಂಕ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಹೌದು. ಸೆಪ್ಟೆಂಬರ್ 9 ರಂದು ಥಿಯೇಟರ್ ಕೆಜಿಎಫ್ ಬರಲಿದೆ ಎನ್ನಲಾಗುತ್ತಿದೆ. ಸಿನಿಮಾದ ಒಟಿಟಿ ಹಕ್ಕಿಗಾಗಿ ಅಮೆಝೋನ್ ಪ್ರೈಮ್ ಜೊತೆ ಮಾತುಕತೆಯೂ ನಡೆಯುತ್ತಿದೆ ಎನ್ನಲಾಗಿದೆ. ಥಿಯೇಟರ್ ಶೇ.100 ರಷ್ಟು ತೆರೆಯಲು ಅವಕಾಶ ಸಿಕ್ಕರೆ ಮತ್ತು ಕೊರೋನಾ ಮೂರನೇ ಅಲೆ ಇಲ್ಲದೇ ಇದ್ದರೆ ಕೆಜಿಎಫ್ 2 ಸಿನಿಮಾ ಸೆಪ್ಟೆಂಬರ್ 9 ರಂದು ಚಿತ್ರ ರಿಲೀಸ್ ಆಗಲಿದೆ. ಎಲ್ಲಾ ಸರಿ ಹೋಗಿದ್ದರೆ ಜುಲೈನಲ್ಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಈ ಬಗ್ಗೆ ಚಿತ್ರತಂಡವೂ ಅಧಿಕೃತ ಪ್ರಕಟಣೆ ಹೊರಹಾಕಿತ್ತು. ಆದರೆ ಕೊರೊನಾ ಆತಂಕ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ತಡವಾಗಿದೆ.