ಬೆಂಗಳೂರಿನಲ್ಲಿ ಮಾಜಿ ಕಾರ್ಪೋರೇಟರ್ ಹತ್ಯೆ. ಬೆಂಗಳೂರು,ಜೂನ್,24,2021(..):ದುಷ್ಕರ್ಮಿಗಳು ಮಾಜಿ ಕಾರ್ಪೋರೇಟರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆಯಾದ ಮಾಜಿ ಕಾರ್ಪೋರೇಟರ್. ಬೆಂಗಳೂರಿನ ಛಲವಾದಿ ಪಾಳ್ಯ ವಾರ್ಡ್ ನ ಮಾಜಿ ಕಾರ್ಪೋರೇಟರ್ ಆಗಿದ್ದರು. ಇಂದು ಬೆಳಿಗ್ಗೆ ಫ್ಲವರ್ ಗಾರ್ಡನ್ ನಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿದ್ಧ ರೇಖಾ ಕದಿರೇಶ್ ಅವರನ್ನ ಹೊರಗೆ ಕರೆದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಬಳಿಕ ರೇಖಾ ಕದಿರೇಶ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ಚಿಕಿತ್ಸೆ ಫಲಿಸದೆ ರೇಖಾ ಕದಿರೇಶ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಹಾಗೂ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 2018 ಫೆಬ್ರವರಿ 8 ರಂದು ರೇಖಾ ಕದಿರೇಶ್ ಅವರ ಪತಿ ಕದಿರೇಶ್ ಅವರನ್ನೂ ಸಹ ದುಷ್ಕರ್ಮಿಗಳು ಕೊಲೆ ಮಾಡಿದ್ದರು. … , 24, 2021 (..): , . , . . . , . .’ 8, 2018.: / / / / : – – -