ಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಕೊಹ್ಲಿ ಕೊಟ್ಟ ಶಾಕಿಂಗ್ ನ್ಯೂಸ್ ! ಬೆಂಗಳೂರು, ಜೂನ್ 24, 2021 (..):ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾ ನಾಯಕ ಕೊಯ್ಲಿ ಹೇಳಿಕೆ ಬದಲಾವಣೆಯ ಸುಳಿವು ನೀಡಿದೆ. ಮುಂದಿನ ದಿನಗಳಲ್ಲಿ ತಂಡದೊಳಗೆ ಮಹತ್ತರ ಬದಲಾವಣೆಗಳನ್ನು ಮಾಡಬೇಕಾದ ಅವಶ್ಯಕತೆ ಇದೆ ಎಂಬ ಮುನ್ಸೂಚನೆಯನ್ನು ಕೊಹ್ಲಿ ನೀಡಿದ್ದಾರೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸೋಲಿನ ಬೆನ್ನಲ್ಲೇ ನಾಯಕ ಕೊಹ್ಲಿ ಹೀಗೆ ಹೇಳಿರುವುದು ಹುಬ್ಬೇರಿಸುವಂತೆ ಮಾಡಿದೆ. ಸಮಚಿತ್ತದಿಂದ ಆಡಬಲ್ಲ ಸಮರ್ಥ ಆಟಗಾರರು ಬೇಕು ಎಂದು ಹೇಳಿರುವುದನ್ನು ಯಾರಿಗೆಲ್ಲ ತಂಡದಿಂದ ಗೇಟ್ ಪಾಸ್ ಸಿಗಲಿದೆ ಎಂಬ ವಿಷಯ ಕುತೂಹಲಕ್ಕೆ ಕಾರಣವಾಗಿದೆ.