ಮೈಸೂರಿನಲ್ಲಿ ಒಬ್ಬರಿಗೆ ಡೆಲ್ಟಾ ಪ್ಲಸ್ ವೈರಸ್ ಪತ್ತೆ-ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ. ಬೆಂಗಳೂರು,ಜೂನ್,23,2021(..):ಮೈಸೂರಿನಲ್ಲಿ ಒಬ್ಬರಿಗೆ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾದ ವ್ಯಕ್ತಿಯಲ್ಲಿ ಯಾವುದೇ ರೋಗ ಲಕ್ಷ್ಮಣ ಇಲ್ಲ. ಸೋಂಕಿತನ ಸಂಪರ್ಕದಿಂದ ಇದು ಬಂದಿಲ್ಲ. ಡೆಲ್ಟಾ ಪ್ಲಸ್ ವೈರಸ್ ಸೂಕ್ಷ್ಮವಾಗಿ ಗಮನಿಸಿದ್ದೇವೆ. ವೈರಸ್ ಪತ್ತೆಗೆ ಕರ್ನಾಟಕದಲ್ಲಿ 6 ಕಡೆ ಲ್ಯಾಬ್ ತೆರೆಯುತ್ತೇವೆ ಎಂದು ತಿಳಿಸಿದರು. ರಾಜ್ಯದಲ್ಲಿ 2 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣವಾಗಿದೆ. ರಾಜ್ಯದ ಈ ಸಾಧನೆಗೆ ಕಾರಣರಾದ ಆರೋಗ್ಯ ಸಿಬ್ಬಂದಿ, ನರ್ಸ್ ಮತ್ತು ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಚಿವ ಸುಧಾಕರ್ ತಿಳಿಸಿದರು. … . . , 23, 2021 (. .): . . (-19 ) . . “ . ,” . , 2 .: / . . / / : - - – - -