2ನೇ ಪತ್ನಿಯ ಮಾತು ಕೇಳಿ ಅಪ್ರಾಪ್ತ ಮಕ್ಕಳಿಗೆ ಬರೆ ಹಾಕಿ ಚಿತ್ರಹಿಂಸೆ ನೀಡಿದ ತಂದೆ ಅರೆಸ್ಟ್. ಬೆಂಗಳೂರು,ಜೂನ್,23,2021(..):ಎರಡನೆಯ ಪತ್ನಿಯ ಮಾತು ಕೇಳಿ ಮೊದಲ ಪತ್ನಿಯ ಅಪ್ರಾಪ್ತ ಮಕ್ಕಳಿಗೆ ತಂದೆಯೊಬ್ಬ ಬರೆ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೆಲ್ವರಾಜ್ ಎಂಬಾತನೇ ಮಕ್ಕಳಿಗೆ ಬರೆ ಹಾಕಿ ಚಿತ್ರಹಿಂಸೆ ನೀಡಿರುವುದು. ಇದೀಗ ಜೆ.ಪಿ ನಗರ ಠಾಣಾ ಪೊಲೀಸರು ಸೆಲ್ವರಾಜ್ ನನ್ನ ಬಂಧಿಸಿದ್ದಾರೆ. ಮಕ್ಕಳು ಹಠ ಮಾಡುತ್ತಾರೆ ಎಂದು ಎರಡನೇ ಪತ್ನಿಯ ಮಾತು ಕೇಳಿದ ಸೆಲ್ವರಾಜ್ ಅಪ್ರಾಪ್ತ ಮಕ್ಕಳ ಮೇಲೆ ಕ್ರೌರ್ಯ ತೋರಿದ್ದಾನೆ. ಅಪ್ರಾಪ್ತ ಮಕ್ಕಳಿಗೆ ಸೌಟಿನಿಂದ ಬರೆ ಹಾಕಿ ಚಿತ್ರಹಿಂಸೆ ನೀಡಿದ್ದಾನೆ ಎನ್ನಲಾಗಿದೆ. ಕಿರುಕುಳ ತಾಳದೇ ಮಕ್ಕಳು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಅಕ್ಕಪಕ್ಕದವರು ಮಕ್ಕಳನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೆಲ್ವರಾಜ್ ಮೊದಲ ಪತ್ನಿ ಮೃತಪಟ್ಟಿದ್ದರು. ಇವರಿಗ ಮೂವರು ಮಕ್ಕಳಿದ್ದಾರೆ. ಮೊದಲ ಪತ್ನಿ ಮೃತಪಟ್ಟ ಹಿನ್ನೆಲೆಯಲ್ಲಿ ಎರಡನೇ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ ಸೆಲ್ವ ಆಕೆಯ ಮಾತು ಕೇಳಿ ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾನೆ. ಜೆಪಿ ನಗರ ಠಾಣೆ ಪೊಲೀಸರು ಆರೋಪಿ ಸೆಲ್ವರಾಜ್ ನನ್ನ ಬಂಧಿಸಿದ್ದು, ಮೂವರು ಮಕ್ಕಳನ್ನ ರಕ್ಷಣೆ ಮಾಡಲಾಗಿದೆ. : – –- -