ದೇಶದಲ್ಲಿ ಇಳಿಕೆ ಕಂಡ ಕೊರೋನಾ: ಹೊಸದಾಗಿ 50 ಸಾವಿರ ಕೋವಿಡ್ ಪ್ರಕರಣಗಳು ಪತ್ತೆ. ನವದೆಹಲಿ,ಜೂನ್,23,2021(..):ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು 2 ಲಕ್ಷ ದಾಟುತ್ತಿದ್ದ ದಿನದ ಪ್ರಕರಣ ಈಗ 50 ಸಾವಿರಕ್ಕೆ ಬಂದು ಇಳಿದಿದೆ. ಹೌದು, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 50,848 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 50,848 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,00,28,709 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 1,358 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ, ಈ ಮೂಲಕ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 3,90,660 ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,43,194 ಕ್ಕೆ ಇಳಿದಿದೆ; 82 ದಿನಗಳಲ್ಲಿ ಕಡಿಮೆ. ಚೇತರಿಕೆ ದರವು 96.56% ಗೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. …. 50,000 , 23, 2021 (..): . 50,000 .50,848 24 . 3,00,28,709.1,358 24 , 3,90,660. 6,43,194 82 . 96.56%.: / -19 / : - –-- 50 - -.