ಬಿಗ್ ಬಿಗೆ ರಶ್ಮಿಕಾ ಕೊಟ್ಟ ಸ್ಪೆಷಲ್ ಗಿಫ್ಟ್ ಏನು? ಬೆಂಗಳೂರು, ಜೂನ್ 22 (..):ಫಾದರ್ಸ್ ಡೇ ವಿಶೇಷವಾದ್ದರಿಂದ ರಶ್ಮಿಕಾ ಮಂದಣ್ಣ ಬಿಗ್ ಬಿಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‍ರ ಜೊತೆ ನಟಿಸುವ ಚಾನ್ಸ್ ಪಡೆದಿರುವ ರಶ್ಮಿಕಾ ನಿನ್ನೆ ವಿಶೇಷ ಉಡುಗೊರೆ ನೀಡಿದ್ದಾರೆ. ಅಂದಹಾಗೆ ಅಮಿತಾಬ್ ಬಚ್ಚನ್ ಜೊತೆ ‘ಗುಡ್ಬೈ‘ಸಿನಿಮಾದಲ್ಲಿ ಈ ಕಿರಿಕ್ ಬೆಡಗಿ ನಟಿಸುತ್ತಿದ್ದಾರೆ. ರಶ್ಮಿಕಾ ಈ ಸರ್ಪ್ರೈಸ್ ಗಿಫ್ಟ್ ಗೆ ಬಿಗ್ ಬಿ ಕೃತಜ್ಞತೆ ಸಲ್ಲಿಸಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಗೆದ್ದ ರಶ್ಮಿಕಾ ಇದೀಗ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟು ಗಮನ ಸೆಳೆಯುತ್ತಿದ್ದಾರೆ.