ಮುಡಾ ( ) ಆಯುಕ್ತ ಡಾ.ನಟೇಶ್ ವರ್ಗಾವಣೆ ರದ್ದು …? ಬೆಂಗಳೂರು, ಜೂ.21, 2021 : (.. ) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ನಟೇಶ್ ವರ್ಗಾವಣೆ ರದ್ದು ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ಶನಿವಾರ, ಜೂ. 19 ರಂದು ಕೆ.ಎ.ಎಸ್ (ಆಯ್ಕೆ ಶ್ರೇಣಿ/ಹಿರಿಯ ಶ್ರೇಣಿ/ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ರಾಜ್ಯ ಸರಕಾರ ಆದೇಶಿಸಿತ್ತು. ಈ ಪೈಕಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ನಟೇಶ್ ಅವರನ್ನು ಪಶುಪಾಲನ ಇಲಾಖೆ ಜಂಟಿ ನಿರ್ದೇಶಕರನ್ನಾಗಿ ವರ್ಗಾಯಿಸಿ, ಆ ಸ್ಥಳದಲ್ಲಿದ್ದ ಶೀಲವಂತ ಎಂ.ಶಿವಕುಮಾರ್ ಅವರನ್ನು ಮುಡಾ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ಆದರೆ ಇದೀಗ ನಡೆದ ಬೆಳವಣಿಗೆಗಳ ಕಾರಣ, ಶನಿವಾರ ಹೊರಡಿಸಿದ್ದ ವರ್ಗಾವಣೆ ಆದೇಶ ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದ್ದು, ಡಾ.ನಟೇಶ್ ಅವರನ್ನೇ ಮತ್ತೆ ಮುಡಾ ಆಯುಕ್ತರನ್ನಾಗಿ ನೇಮಕಗೊಳಿಸಿ ಸದ್ಯದಲ್ಲೇ ಮರು ಆದೇಶ ಹೊರಡಿಸಲಾಗುತ್ತದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. …. . ’ ?, 21, 2021 (..): , . . ... ( / / ) , 19, 2021, . . , . . . , . . .: / . / / : -------