ಅಭಿನಂದನೆಗಳು : “ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ 2024” ಗೆ ವಿಟಿಯು ಆಯ್ಕೆ..! ! 2024 ಬೆಳಗಾವಿ, ಮೇ.31,2024: (.. ) ಎಕನಾಮಿಕ್ ಟೈಮ್ಸ್ ಇಟಿ ಎಜುಕೇಷನ್ ನ “ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ 2024” ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಆಯ್ಕೆಗೊಂಡಿದೆ. ಈ ಸಂಬಂಧ ವಿಟಿಯುಗೆ ಮೇಲ್‌ ಮೂಲಕ ಅಧಿಕೃತ ಮಾಹಿತಿ ನೀಡಿರುವ ಎಕನಾಮಿಕ್‌ ಟೈಮ್ಸ್‌ ಸಂಸ್ಥೆ, ಜೂನ್‌ 6 ಮತ್ತು 7 ರಂದು ದಿಲ್ಲಿಯ ಲೀಲಾ ಅಂಬಿಯನ್ಸ್‌ ಕನ್ವೆಂಷನ್‌ ಹೋಟೆಲ್‌ ನಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದೆ. ಅಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ದೂರಶಿಕ್ಷಣ ಕಾರ್ಯಕ್ರಮಗಳಲ್ಲಿ ವಿಟಿಯುವಿನ , ದೂರ ಮತ್ತು ಆನ್ ಲೈನ್ ಶಿಕ್ಷಣ ಕೇಂದ್ರ ಉತ್ಕೃಷ್ಟತೆ ಸಾಧನೆ ಮಾಡಿರುವುದನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ʼ ಶಿಕ್ಷಣ ಶೃಂಗಸಭೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ 2024 ʼ ದಲ್ಲಿ ಭಾಗವಹಿಸುವಂತೆ ಅಧಿಕೃತ ಆಹ್ವಾನ ನೀಡಿದೆ. ಕುಲಪತಿ ಸಂತಸ : ಎಕನಾಮಿಕ್ ಟೈಮ್ಸ್ ಇಟಿ ಎಜುಕೇಷನ್ ನ “ಎಜುಕೇಶನ್ ಎಕ್ಸಲೆನ್ಸ್ ಅವಾರ್ಡ್ಸ್ 2024” ಗೆ ವಿಟಿಯು ಆಯ್ಕೆಗೊಂಡಿರುವುದಕ್ಕೆ ಕುಲಪತಿ ಪ್ರೊ.ವಿದ್ಯಾಶಂಕರ್‌ ಸಂತಸ ವ್ಯಕ್ತಪಡಿಸಿದರು. ತಾಂತ್ರಿಕ ವಿವಿಯಾಗಿರುವ ಹಿನ್ನೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ಆನ್‌ ಲೈನ್‌ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಪರೀಕ್ಷೆ ಮುಗಿದ ಕೆಲವೇ ಕೆಲ ಗಂಟೆಗಳಲ್ಲಿ ಫಲಿತಾಂಶವನ್ನು ಸಹ ಪ್ರಕಟಿಸಿ ಹೊಸ ದಾಖಲೆ ಬರೆದಿದ್ದೇವೆ. ಇನ್ನು ಮುಂದೆ ಇದೇ ರೀತಿ ವಿಟಿಯು ತಾಂತ್ರಿಕ ಸಹಾಯದಿಂದ ಹಲವಾರು ನೂತನ ಯೋಜನೆಗಳನ್ನು ಜಾರಿಗೊಳಿಸಲಿದೆ ಎಂದರು. : , , 2024, : : “ 2024″…! 6 7. 6 . , --- . , . , , ( . ) .