ಚಾಮರಾಜನಗರ- ಮೈಸೂರು ಜಿಲ್ಲೆಗಳಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳ ಸಭೆ ಮೈಸೂರು: ಕೊರೊನ 3ನೇ ಅಲೆ ಸಂಭಾವ್ಯ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಿಂದ ಎರಡು ಜಿಲ್ಲೆಗಳ ಪ್ರವಾಸ‌ ಕೈಗೊಂಡಿದ್ದಾರೆ. ಇಂದು ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಸಂಚಾರ.ಎರಡು ಜಿಲ್ಲೆಗಳಲ್ಲೂ ಸಭೆ ನಡೆಸಲಿರುವ ಸಚಿವ ಶಶಿಕಲಾ ಜೊಲ್ಲೆ. ಕೊರೊನ 3ನೇ ಅಲೆಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ‌ ನಡೆಸಲಿದ್ದಾರೆ. ಕೋವಿಡ್ 2ನೇ ಅಲೆಯಿಂದ ಪಾಲಕರನ್ನ ಕಳೆದುಕೊಂಡ ಮಕ್ಕಳನ್ನು ಭೇಟಿ ಮಾಡಲಿರುವ ಸಚಿವೆ. ಇಂದು ಮಧ್ಯಾಹ್ನ1 ಗಂಟೆಗೆ ಚಾಮರಾಜನಗರದಲ್ಲಿ ಹಾಗೂ ಸಂಜೆ5 ಕ್ಕೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಸಿಎಂ ಬದಲಾವಣೆ ಪರ ವಿರೋಧ ಚರ್ಚೆಯ ನಡುವೆಯೂ ಇಲಾಖೆಯ ಕೆಲಸದಲ್ಲಿ ಮಗ್ನರಾದ ಸಚಿವೆ ಶಶಿಕಲಾ ಜೊಲ್ಲೆ ಮಗ್ನರಾಗಿದ್ದಾರೆ.