ನೀರಾವರಿ ಇಲಾಖೆಯ ಟೆಂಡರ್ ಹಗರಣ ಸತ್ಯಕ್ಕೆ ದೂರವಾದದ್ದು- ಶಾಸಕ ಎಂ.ಪಿ ರೇಣುಕಾಚಾರ್ಯ ಸ್ಪಷ್ಟನೆ ಬೆಂಗಳೂರು,ಜೂನ್,18,2021(..):ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ರೂ. ಟೆಂಡರ್ ಅಕ್ರಮ ನಡೆದಿದೆ ಎಂದು ಸ್ವತಃ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಅವರೇ ಮಾಡಿರುವ ಗಂಭೀರ ಆರೋಪವನ್ನ ಶಾಸಕ ಎಂ.ಪಿ ರೇಣುಕಾಚಾರ್ಯ ತಳ್ಳಿ ಹಾಕಿದ್ದಾರೆ. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ನೀರಾವರಿ ಇಲಾಖೆಯ ಟೆಂಡರ್ ಹಗರಣ ಸತ್ಯಕ್ಕೆ ದೂರವಾದದ್ದು. ಟೆಂಡರ್ ಬಗ್ಗೆ ವೆಬ್ ಸೈಟ್ ನಲ್ಲಿ ಎಲ್ಲಾ ಮಾಹಿತಿ ನೀಡಲಾಗಿದೆ. ನೀರಾವರಿ ಇಲಾಖೆಯ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ ಎಂದು ಸ್ಪಷ್ಟನೆ ನೀಡಿದರು. ಆ ವ್ಯಕ್ತಿಯ ನಾಲಿಗೆ ಸಂಸ್ಕೃತಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಾನು ಯಾರ ವಿರುದ್ದವೂ ಹಗುರವಾಗಿ ಮಾತನಾಡಲ್ಲ ನಾನು ವ್ಯಕ್ತಿಗತವಾಗಿ ಮಾತನಾಡಲ್ಲ . ಅವರ ಆಡಿಯೋ ವಿಡೀಯೋ ಎಲ್ಲರಿಗೂ ಗೊತ್ತಿದೆ. ಅದು ಪ್ಲೆ ಆದ್ರೆ ಅವರ ಸಂಸ್ಕೃತಿ ತಿಳಿಯುತ್ತೆ ಎಂದು ಎಂ.ಪಿ ರೇಣುಕಾಚಾರ್ಯ ಟಾಂಗ್ ನೀಡಿದರು. : – – – .