ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ರೈಲು ಸೇವೆಗಳ ಪುನಾರಂಭ: ವೇಳಾಪಟ್ಟಿ ಹೀಗಿದೆ ನೋಡಿ. ಮೈಸೂರು,ಜೂನ್,17,2021(..):ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಲಾಕ್‌ ಡೌನ್ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ನೈಋತ್ಯ ರೈಲ್ವೆ ಮೈಸೂರು ವಿಭಾಗವು ಹೆಚ್ಚುವರಿ ಕಾಯ್ದಿರಿಸದ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ರೈಲ್ವೆ ಮೈಸೂರು ವಿಭಾಗ ಹಲವಾರು ರೈಲು ಸೇವೆಗಳನ್ನು ಪುನಃ ಆರಂಭಿಸಿದ್ದು, ಕೋವಿಡ್-19 ಗೆ ಸಂಬಂಧಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ನಿಯಮಗಳನ್ನು ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ. ಕೋವಿಡ್-19 ಗೆ ಸಂಬಂಧಿಸಿದ ಇತರ ಮುನ್ನೆಚ್ಚರಿಕೆಗಳನ್ನು ಸಹ ತಪ್ಪದೆ ಪಾಲಿಸಬೇಕೆಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಡಾ.ಮಂಜುನಾಥ್ ಕನಮಡಿ ಮನವಿ ಮಾಡಿದ್ದಾರೆ. ಈ ರೈಲುಗಳು ಕೋವಿಡ್‌ ನ ಪೂರ್ವ ವೇಳಾಪಟ್ಟಿ ಮತ್ತು ನಿಲುಗಡೆಗಳೊಂದಿಗೆ ಕೆಳಗೆ ವಿವರಿಸಿರುವಂತೆ ಚಲಿಸುತ್ತವೆ. ರಾಜ್ಯರಾಣಿಎಕ್ಸ್ ಪ್ರೆಸ್ ರಾಜ್ಯರಾಣಿಎಕ್ಸ್ ಪ್ರೆಸ್ ಚಾಮುಂಡಿ ಎಕ್ಸ್ ಪ್ರೆಸ್ ಚಾಮುಂಡಿ ಎಕ್ಸ್ ಪ್ರೆಸ್ ಟಿಪ್ಪು ಎಕ್ಸ್ ಪ್ರೆಸ್ ಟಿಪ್ಪು ಎಕ್ಸ್ ಪ್ರೆಸ್ ಇಂಟರ್ ಸಿಟಿ ಇಂಟರ್ ಸಿಟಿ ಇಂಟರ್ ಸಿಟಿ ಇಂಟರ್ ಸಿಟಿ ಜನ ಶತಾಬ್ಧಿ ಜನ ಶತಾಬ್ಧಿ ಬಸವ ಎಕ್ಸ್ ಪ್ರೆಸ್ ಬಸವ ಎಕ್ಸ್ ಪ್ರೆಸ್ : – - –- - –