ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು ಹೀಗೆ. ಬೆಳಗಾವಿ,ಜೂನ್,17,2021(..):ರಾಜ್ಯದಲ್ಲಿ ಸಿಎಂ ಬದಲಾವಣೆ ಮಾಡೋಕೆ ಸಾಧ್ಯವೇ ಇಲ್ಲ. ಮುಂದಿನ 2 ವರ್ಷ ಬಿಎಸ್ ವೈ ಅವರೇ ಸಿಎಂ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪರೇ ಮುಖ್ಯಮಂತ್ರಿ ಆಗಿರ್ತಾರೆ ಹಾಗೂ ಮುಂದಿನ ಚುನಾವಣೆಯನ್ನೂ ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಎದುರಿಸಲಿದ್ದೇವೆ. ನಾವು ಯಡಿಯೂರಪ್ಪ ಹಾಗೂ ಅಮಿತ್​ ಶಾರನ್ನ ನಂಬಿಯೇ ಬಿಜೆಪಿಗೆ ಬಂದಿದ್ದೇವೆ. ಬಿಜೆಪಿಯ ಎಲ್ಲಾ ಶಾಸಕರೂ ಒಂದು ಕುಟುಂಬದವರಂತೆ ಇದ್ದೇವೆ. ಯಡಿಯೂರಪ್ಪ ಎಲ್ಲರನ್ನೂ ಕರೆದು ಒಮ್ಮೆ ಮಾತನಾಡಬೇಕು ಎಂದು ನಾನು ಅವರಲ್ಲಿ ಮನವಿ ಮಾಡುತ್ತೇನೆ ಎಂದರು. ಸಿ.ಪಿ ಯೋಗೀಶ್ವರ್​ ಈಗಲೂ ನನ್ನ ಸ್ನೇಹಿತ..ನಮ್ಮ 20 ಶಾಸಕ ಮಿತ್ರರನ್ನು ಕೂಡಿಸಲು ಯೋಗೇಶ್ವರ್ ಪಾತ್ರ ಬಹಳ ಮುಖ್ಯ ಇದೆ. ದಯವಿಟ್ಟು ಏನಾದರೂ ತಪ್ಪು ಗ್ರಹಿಕೆ ಇದ್ರೆ ಸಿಎಂ ಜೊತೆ ಚರ್ಚಿಸಿ ಮುಂದುವರೆಯೋದು ಒಳ್ಳೆಯದು ಎಂದು ಸಚಿವ ಸಿ‌.ಪಿ.ಯೋಗೇಶ್ವರ್‌ಗೆ ರಮೇಶ್ ಜಾರಕಿಹೊಳಿ‌ ಸಲಹೆ ನೀಡಿದರು. : - - – .