ಹೆಚ್.ವಿಶ್ವನಾಥ್ ರಸ್ತೆಯಲ್ಲಿ ಓಡಾಡುವ ಹುಚ್ಚರಂತೆ ಮಾತನಾಡ್ತಿದ್ದಾರೆ- ಎಸ್.ಆರ್ ವಿಶ್ವನಾಥ್ ವಾಗ್ದಾಳಿ. ಬೆಂಗಳೂರು,ಜೂನ್,17,2021(..):ಸಿಎಂ ಬದಲಾವಣೆಗೆ ಆಗ್ರಹಿಸಿದ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ವಿರುದ್ಧ ಸಿಎಂ ಬಿಎಸ್ ಯಡಿಯೂರಪ್ಪ ಪರ ಶಾಸಕರು ಮುಗಿಬೀಳುತ್ತಿದ್ದು ಶಾಸಕ ಎಂ.ಪಿ ರೇಣುಕಾಚಾರ್ಯ ಬಳಿಕ ಇದೀಗ ಶಾಸಕ ಎಸ್.ಆರ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಹೆಚ್.ವಿಶ್ವನಾಥ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಸ್.ಆರ್ ವಿಶ್ವನಾಥ್, ಹೆಚ್.ವಿಶ್ವನಾಥ್ ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾರೆ. ಜೆಡಿಎಸ್ . ಕಾಂಗ್ರೆಸ್ ಗೆ ದ್ರೋಹ ಬಗೆದ್ರು. ಈಗ ಬಿಜೆಪಿಗೆ ದ್ರೋಹ ಬಗೆಯುತ್ತಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯುವುದೇ ವಿಶ್ವನಾಥ್ ಗುಣ. ಅವರು ಅರೆ ಹುಚ್ಚರಂತೆ ಕಾಣಿಸುತ್ತಿದೆ. ರಸ್ತೆಯಲ್ಲಿ ಓಡಾಡುವ ಹುಚ್ಚರಂತೆ ಮಾತನಾಡುತ್ತಿದ್ದಾರೆ. ಅವರು ಯಾವುದೇ ಪಾರ್ಟಿಗೆ ಹೋದರೂ ಇದೇ ಗೋಳು ಎಂದು ಕಿಡಿಕಾರಿದರು. ವಿಶ್ವನಾಥ್ ಬಹಿರಂಗ ಹೇಳಿಕೆ ನೀಡಿದ್ದು ಸರಿಯಲ್ಲ. ಅರುಣ್ ಸಿಂಗ್ ಬಳಿ ಹೇಳಿದ್ದನ್ನ ಬಹಿರಂಗವಾಗಿ ಹೇಳಬಾರದಿತ್ತು. ಇನ್ಮುಂದೆ ವಿಶ್ವನಾಥ್ ಗೆ ಯಾವುದೇ ಪಕ್ಷದ ಸದಸ್ಯತ್ವ ಸಿಗುವುದಿಲ್ಲ. ಯಾವುದೇ ಪಕ್ಷದಲ್ಲೂ ಜಾಗ ಇಲ್ಲ. ಬಿಎಸ್ ವೈ ಅವರೇ 2 ವರ್ಷ ಸಿಎಂ ಆಗಿ ಇರ್ತಾರೆ ಎಂದು ಎಸ್.ಆರ್ ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು. : . – - – –-