ಡ್ರಗ್ಸ್ ವಿಚಾರದಲ್ಲಿ ನಾನೇ ಟಾರ್ಗೆಟ್ ಆಗಿದ್ದೆ ಎಂದ ರಾಗಿಣಿ ಬೆಂಗಳೂರು, ಜೂನ್ 17, 2021 (..):ಡ್ರಗ್ಸ್ ವಿಚಾರದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ರಾಗಿಣಿ ದ್ವಿವೇದಿ ಅಳಲು ತೋಡಿಕೊಂಡಿದ್ದಾರೆ. ಡ್ರಗ್ಸ್ ವಿಚಾರದಲ್ಲಿ ನನ್ನನ್ನು 100 % ಟಾರ್ಗೆಟ್ ಮಾಡಲಾಗಿದೆ ಎಂದಿರುವ ರಾಗಿಣಿ ಕಾಸ್ಟಿಂಗ್ ಕೌಚ್ ಎಕ್ಸ್​​ಪೀರಿಯನ್ಸ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ ವಿಜಯಪುರದ ಖಾಸಗಿ ಹೊಟೇಲಿನಲ್ಲಿ ಮಂಗಳಮುಖಿಯರಿಗೆ ಕೊರೊನಾ ಲಸಿಕೆ ಹಾಕುವ ಮತ್ತು ಆಹಾರದ ಕಿಟ್ ವಿತರಣೆಯಲ್ಲಿ ರಾಗಿಣಿ ಭಾಗಿಯಾಗಿದ್ದರು. ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್. ನೀವು ನಡೆಸುವ ಜೀವನದ ಜರ್ನಿ ಮೇಲೆ ಅದು ಡಿಪೆಂಡ್ ಆಗಿರುತ್ತೆ ಎಂದಿದ್ದಾರೆ.