ಶ್ರೀರಾಮುಲು ಅವರನ್ನ ಡಿಸಿಎಂ ಮಾಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡಬೇಕು –ಶಾಸಕ ಸೋಮಶೇಖರ ರೆಡ್ಡಿ ಆಗ್ರಹ. ಬಳ್ಳಾರಿ,ಜೂನ್,17,2021(..): ಶ್ರೀರಾಮುಲು ಅವರನ್ನ ಡಿಸಿಎಂ ಮಾಡಬೇಕು. ಬಳ್ಳಾರಿ ಉಸ್ತುವಾರಿಯನ್ನ ಅವರಿಗೆ ನೀಡಬೇಕು ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಆಗ್ರಹಿಸಿದ್ದಾರೆ. ಬಳ್ಳಾರಿಯಲ್ಲಿ ಇಂದು ಮಾತನಾಡಿ ಶಾಸಕ ಸಚಿವರ ಜತೆ ಅರುಣ್ ಸಿಂಗ್ ಸಭೆಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸೋಮಶೇಖರ ರೆಡ್ಡಿ, ಬಳ್ಳಾರಿಯಲ್ಲಿ ಮಾಡಬೇಕಾದ ಕೆಲಸ ಬೇಕಾದಷ್ಟು ಇದೆ. ಬೆಂಗಳೂರಿಗೆ ಹೋಗಿ, ಭೇಟಿ ಮಾಡಿ ಏನು ಮಾಡಲಿ. ಬಿಜೆಪಿಯಲ್ಲಿ ಅಸಮಾಧಾನ ಇರೋದು ನಿಜ. ಕೊರೋನಾ ಸಮಯದಲ್ಲಿ ಅಸಮಾಧಾನ ಬೇಕಿರಲಿಲ್ಲ. ಬಿಎಸ್ ವೈ ಅವರೇ ಮುಂದಿನ 2 ವರ್ಷ ಸಿಎಂ ಆಗಿ ಮುಂದುವರೆದರೆ ಒಳ್ಳೆಯದು ಎಂದರು. ಹಾಗೆಯೇ ಅರುಣ್ ಸಿಂಗ್ ರನ್ನ ಭೇಟಿಯಾಗಲ್ಲ. ಶ್ರೀರಾಮುಲು ಅವರನ್ನ ಡಿಸಿಎಂ ಮಾಡಬೇಕು. ಬಳ್ಳಾರಿ ಉಸ್ತುವಾರಿಯನ್ನ ಬದಲಾಯಿಸಬೇಕು ಎಂದು ಒತ್ತಾಯಿಸಿದರು. ….. “ -: , 17, 2021 (..): “ -,” . , - ’ . “ . ? . -19 . .. ,” .: / / / / / - : - –-