ಕಿರುತೆರೆಗೆ ಎಂಟ್ರಿ ಕೊಡಲು ಮಿಲ್ಕಿ ಬ್ಯೂಟಿ ತಮನ್ನಾ ರೆಡಿ ಬೆಂಗಳೂರು, ಜೂನ್ 16, 2021 (..):ನಟಿ ತಮನ್ನಾ ಭಾಟಿಯಾ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಅಂದಹಾಗೆ ತೆಲುಗಿನ ಜನಪ್ರಿಯ ವಾಹಿನಿ ಜೆಮಿನಿ ಟಿವಿಯಲ್ಲಿ ಪ್ರಸಾರವಾಗಲಿರುವ ಅಡುಗೆ ಶೋಅನ್ನು ತಮನ್ನಾ ನಡೆಸಿಕೊಡಲಿದ್ದಾರೆ. ಈ ಶೋನಲ್ಲಿ ಗೆಲ್ಲುವವರಿಗೆ ಬರೋಬ್ಬರಿ 25 ಲಕ್ಷ ರೂಪಾಯಿ ಬಹುಮಾನದ ಹಣ ಸಿಗಲಿದೆ. ತಮನ್ನಾ ತಮಿಳಿನ ‘ನವೆಂಬರ್ ಸ್ಟೋರಿ’ ವೆಬ್​ ಸೀರಿಸ್​ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಈ ಶೋ ನಡೆಸಿಕೊಡೋಕೆ ಕೋಟಿ ಮೊತ್ತದ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.