ಮತ್ತೆ ಬಿಗ್ ಬಾಸ್ ಮನೆಗೆ ತೆರಳಲು ಸೂಟ್ ಕೇಸ್ ರೆಡಿ ಮಾಡುತ್ತಿದ್ದಾರೆ ಸ್ಪರ್ಧಿಗಳು! ಬೆಂಗಳೂರು, ಜೂನ್ 16, 2021 (..):ಪುನಾರಂಭದ ಸೂಚನೆ ಬಳಿಕ ಬಿಗ್​ಬಾಸ್​​ ಮನೆಯೊಳಗೆ ಮತ್ತೆ ಹೋಗೋಕೆ ಸ್ಪರ್ಧಿಗಳು ಬ್ಯಾಗ್​ ಪ್ಯಾಕ್ ಮಾಡುತ್ತಿದ್ದಾರೆ. ವಿಶೇಷ ಎಂದರೆ ಈ ಬಾರಿ ಒಳಹೋಗುವವರ ಸಂಖ್ಯೆಯಲ್ಲಿ ಬದಲಾವಣೆಯಾಗಲಿದೆ. ಕಲರ್ಸ್​ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಇಂದು ಹಂಚಿಕೊಳ್ಳಲಾಗಿರುವ ಫೋಟೋ ಒಂದು ಬಿಗ್​ಬಾಸ್​ ಮುಂದುವರೆಯಲಿದೆ ಎಂಬುದಕ್ಕೆ ಪುಷ್ಟಿ ನೀಡಿದೆ. ಈಗ ವಾಹಿನಿಯೇ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿರುವ ಕಾರಣ ಬಿಗ್​ಬಾಸ್ ಮುಂದುವರೆಯುವುದಂತೂ ಖಚಿತವಾಗಿದೆ. ವಾಹಿನಿ ಹಂಚಿಕೊಂಡಿರುವ ಫೋಟೋದಲ್ಲಿ 12 ಸೂಟ್​ಕೇಸ್​ಗಳು ಕಂಡುಬಂದಿದೆ. ಆ ಇನ್ನೊಂದು ಸ್ಪರ್ಧಿ ಯಾರು ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಬಿಗ್​ಬಾಸ್ ಅರ್ದಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್.ಕೆ.ಪಿ, ಮಂಜು ಪಾವಗಡ, ಶಮಂತ್​ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್​, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್​, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ ಸೇರಿ ಒಟ್ಟು 10 ಜನ ಇದ್ದರು. ದಿವ್ಯಾ ಉರುಡುಗ ಎಲಿಮಿನೇಟ್ ಆಗದಿದ್ದರೂ ಅನಾರೋಗ್ಯದ ಕಾರಣ ಹೊರಬಂದಿದ್ದರು.