ಮ್ಯೂನಿಕ್ ನಿಂದ ಬೆಂಗಳೂರಿನತ್ತ ಹೊರಟ ಸಂಸದ ಪ್ರಜ್ವಲ್ ರೇವಣ್ಣ. ಬೆಂಗಳೂರು,ಮೇ30,2024 (..):ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೆ ವಿದೇಶಕ್ಕೆ ಹಾರಿ ಇಷ್ಟು ದಿನ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕೊನೆಗೂ ಬೆಂಗಳೂರಿನತ್ತ ಹೊರಟಿದ್ದಾರೆ. ಪ್ರಜ್ವಲ್ ರೇವಣ್ಣ ವಿಮಾನದಲ್ಲಿ ಮ್ಯೂನಿಕ್​ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಜ್ವಲ್ ಆಗಮಿಸುತ್ತಿರುವ LH764 ವಿಮಾನ ಮ್ಯೂನಿಕ್‌ ಏರ್‌ಪೋರ್ಟ್‌ನಿಂದ ಟೇಕಾಫ್ ಆಗಿದೆ. ಈಗಾಗಲೇ ಲಗೇಜ್ ಚೆಕ್ ಇನ್ ಮಾಡಿಸಿರುವ ಪ್ರಜ್ವಲ್​, ಬ್ಯುಸಿನೆಸ್​​ ಕ್ಲಾಸ್​​ ಪ್ರಯಾಣಿಕರ ಜೊತೆ ಕುಳಿತುಕೊಂಡಿದ್ದಾರೆ. ಪ್ರಜ್ವಲ್‌ ರೇವಣ್ಣ 4 ಬ್ಯಾಗ್ ತಂದಿರುವ ಮಾಹಿತಿ ಇದೆ. ಕೆಂಪೇಗೌಡ ಏರ್‌ಪೋರ್ಟ್‌ಗೆ ಮಧ್ಯರಾತ್ರಿ ಆಗಮಿಸಲಿದ್ದಾರೆ. ಇತ್ತೀಚೆಗೆ ಮೇ 31 ರಂದು ಬೆಂಗಳೂರಿಗೆ ವಾಪಸ್ ಬಂದು ಎಸ್​ಐಟಿ ಮುಂದೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿಕೆ ಬಿಡುಗಡೆ ಮಾಡಿದ್ದರು. ಇನ್ನು ಪ್ರಜ್ವಲ್ ರೇವಣ್ಣ ಏರ್ ಪೋರ್ಟ್ ಗೆ ಆಗಮಿಸುತ್ತಿದ್ದಂತೆ ಬಂಧನಕ್ಕೆ ಎಸ್ ಐಟಿ ಸಜ್ಜಾಗಿದೆ. : , , ,