ಜೂನ್ 21 ರಿಂದ ಮಾರುಕಟ್ಟೆಗಳು, ಜ್ಯೂವೆಲ್ಲರಿ ಶಾಪ್ ಸೇರಿ ವಾಣಿಜ್ಯ ಮಳಿಗೆಗಳನ್ನ ತೆರೆಯಲು ಅವಕಾಶ..? ಬೆಂಗಳೂರು,ಜೂನ್,15,2021(..): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಜಾರಿ ಮಾಡಲಾಗಿದ್ದ ಲಾಕ್ ಡೌನ್ ಅನ್ನ ತೆರವು ಗೊಳಿಸಲಾಗುತ್ತಿದೆ. ಮೊದಲ ಹಂತವಾಗಿ ಈಗಾಗಲೇ 19 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗಿದೆ. ಸೋಂಕು ಹೆಚ್ಚಿರುವ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್ ಡೌನ್ ಮುಂದುವರೆದಿದ್ದು ಆ ನಂತರ ಅನ್ ಲಾಕ್ 2.0 ಪ್ರಾರಂಭವಾಗಲಿದೆ. ಈ ವೇಳೆಯಲ್ಲಿ ಹೋಟೆಲ್ ಕಿರುಮಾರುಕಟ್ಟೆಗಳು, ಬಟ್ಟೆ ಅಂಗಡಿಗಳು ಚಿನ್ನದ ಅಂಗಡಿಗಳು, ಸೇರಿ ವಾಣಿಜ್ಯ ಮಳಿಗೆಗಳನ್ನ ತೆರೆಯಲು ಅವಕಾಶ ನೀಡಲು ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ದಿನದ 8 ಗಂಟೆಯೂ ವ್ಯಾಪಾರಕ್ಕೆ ಅವಕಾಶವಿರುತ್ತದೆ. ಇನ್ನು ಮದುವೆಗಳಲ್ಲಿ 50 ಮಂದಿಗೆ ಮಾತ್ರ ಅವಕಾಶ, ಹಾಗೂ ಶೇ.,50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರ ಆರಂಭಿಸುವ ಸಾಧ್ಯತೆ ಇದೆ. : -- 21- - -