ಭೂಕಬಳಿಕೆ ಆರೋಪ ವಿಚಾರ: ಹೆಚ್.ವಿಶ್ವನಾಥ್ ವಿರುದ್ಧ ಶಿವಣ್ಣ ಕಿಡಿ. ಮೈಸೂರು,ಜೂನ್,12,2021(..):ಶಾಸಕ ಸಾ.ರಾ ಮಹೇಶ್ ವಿರುದ್ಧ ಭೂಕಬಳಿಕೆ ಆರೋಪ ಹಿನ್ನೆಲೆ, ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರುದ್ಧ ಕಿಡಿಕಾರಿರುವ ಕರ್ನಾಟಕ ಪ್ರಜಾಪಾರ್ಟಿ ರಾಜ್ಯಾಧ್ಯಾಕ್ಷ ಶಿವಣ್ಣ, ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಆದ್ರೇ ನೀವು ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುತಿದ್ದಿರಾ ಎಂದು ವಾಗ್ದಾಳಿ ನಡೆಸಿದರು. ಭೂ ಕಬಳಿಕೆ ಆರೋಪ ಹಿನ್ನಲೆ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ಪ್ರಜಾಪಾರ್ಟಿ ರಾಜ್ಯಾಧ್ಯಾಕ್ಷ ಶಿವಣ್ಣ, ವಿಶ್ವನಾಥ್ ಅವರು ಸಾರಾ ಮಹೇಶ್ ಬಗ್ಗೆ ಆರೋಪ ಮಾಡುವುದಕ್ಕೂ ಮುಂಚೆ ದಾಖಲೆಗಳನ್ನ ಇಟ್ಟುಕೊಳ್ಳಬೇಕು. ಇದರ ಜೊತೆ ತಮ್ಮ ಮಗನೆ ಬೇರೆಯವರ ಭೂ ಕಬಳಿಕೆಗೆ ಪ್ರಯತ್ನ ಮಾಡಿದ್ದಾರೆ. ಅಮಿತ್ ದೇವರಹಟ್ಟಿ ವಿರುದ್ದ ಈಗಾಗಲೇ ಎಫ್ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಅವರು ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮಿನಿಗೆ ಅರ್ಜಿ ಹಾಕಿದ್ದರು. ನಂತರ ಮೈಸೂರಿನಲ್ಲಿ ಭೂ ವಿವಾದ ದೊಡ್ಡ ಮಟ್ಟಕ್ಕೆ ಬೆಳೆದ ನಂತರ ಅವರು ತಮ್ಮ ಜಮೀನು ಅರ್ಜಿಯನ್ನ ವಜಾ ಪಡಿಸಿಕೊಂಡಿದ್ದಾರೆ. ಹೀಗೆ ತಮ್ಮಲ್ಲೇ ಹುಳುಕು ಇಟ್ಟುಕೊಂಡು ಬೇರೆಯವರ ಮೇಲೆ ಆಪಾದನೆ ಮಾಡಬಾರದು ಎಂದು ಶಿವಣ್ಣ ಹರಿಹಾಯ್ದರು. : ---