ಯಾರಾದ್ರೂ ದೆಹಲಿಗೆ ಹೋಗಿಬಿಟ್ರೆ ಭಿನ್ನಮತ ಹೇಗಾಗುತ್ತೆ..? ಕೇಂದ್ರಸಚಿವ ಪ್ರಹ್ಲಾದ್ ಜೋಶಿ. ಹುಬ್ಬಳ್ಳಿ,ಜೂನ್,12,2021(..):ರಾಜ್ಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಯಾರಾದ್ರೂ ದೆಹಲಿಗೆ ಹೋಗಿಬಿಟ್ಟರೆ ಭಿನ್ನಮತ ಹೇಗಾಗುತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ. ಸಿಎಂ ಬದಲಾವಣೆ ವಿಚಾರ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರ ಎಲ್ಲ ರೀತಿಯಿಂದ ಒಳ್ಳೆ ಕೆಲಸ ಮಾಡ್ತಿದೆ. ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡ್ತಿದಾರೆ. ಈ ವಯಸ್ಸಿನಲ್ಲಿಯೂ ಕೋವಿಡ್​​ನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಗಾಗಿ ಈ ಸಂದರ್ಭದಲ್ಲಿ ಯಡಿಯೂರಪ್ಪ ರನ್ನು ಬದಲಾಯಿಸೋ ಪ್ರಶ್ನೆಯಿಲ್ಲ. ಇನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಅವರೂ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ನಾಯಕತ್ವ ಬದಲಾವಣೆ ಚರ್ಚೆಯನ್ನು ಯಾರೂ ಹುಟ್ಟು ಹಾಕಬಾರದು. ರಾಜ್ಯ ನಾಯಕರಲ್ಲಿ ಯಾವುದೇ ಭಿನ್ನಮತ, ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿಯವರೇ ವಿರೋಧ ಪಕ್ಷದವರಾಗಿ ಕೆಲಸ ಮಾಡೋ ಅನಿವಾರ್ಯತೆ ಇದೆ ಅನ್ನೋ ಮಾತನ್ನು ಒಪ್ಪಲ್ಲ. ಈ ಸಂದರ್ಭದಲ್ಲಿ ಕೋವಿಡ್ ನಿರ್ವಹಣೆ ಅಷ್ಟೇ ನಮ್ಮ ಆದ್ಯತೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು. : - –- -