‘ ಆ ಒಂದು ವಿಷಯ’ ಸರಿ ಮಾಡಿಕೊಂಡರೆ ರೋಹಿಣಿ ಸಿಂಧೂರಿ ಒರ್ವ ಉತ್ತಮ ಅಧಿಕಾರಿ: ಮಾಜಿ ಶಾಸಕ ಎ.ಮಂಜು. ಮೈಸೂರು, ಜೂ.12, 2021 : (.. ) : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ನಡವಳಿಕೆ ಸರಿ ಮಾಡಿಕೊಂಡರೆ ಅವರು ಒರ್ವ ಉತ್ತಮ ಅಧಿಕಾರಿ ಆಗುತ್ತಾರೆ ಎಂದು ಮಾಜಿ ಶಾಸಕ ಎ.ಮಂಜು ಕಿವಿಮಾತು ಹೇಳಿದರು.ಮೈಸೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜು ಹೇಳಿದಿಷ್ಟು..ಡಿಸಿಯಾಗಿದ್ದ ರೋಹಿಣಿ ಸಿಂಧೂರಿಯನ್ನ ನಾನು ಹತ್ತಿರದಿಂದ ಬಲ್ಲೆ. ಅವರ ಆಡಳಿತದ ಸಂದರ್ಭದಲ್ಲಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ಹೀಗಾಗಿಯೇ ಅವರ ಬಗ್ಗೆ ನಾನು ಮಾತನಾಡುತ್ತಿದ್ದೇನೆ‌.ಡಿಸಿಯಾಗಿದ್ದ ರೋಹಿಣಿ ಸಿಂಧೂರಿ ಪ್ರಚಾರ ಪ್ರಿಯೆ, ಹಿರಿಯ ರಾಜಕಾರಣಿಗಳಿಗೆ ಗೌರವ ಕೊಡಲ್ಲ .ಒಬ್ಬ ಶಾಸಕರನ್ನ ಕುರಿತು ಏಕವಚನದಲ್ಲಿ ಮಾತನಾಡೋದು ವೆರಿ ಬ್ಯಾಡ್. ಈ ರೀತಿಯ ವರ್ತನೆಯನ್ನು ರೋಹಿಣಿ ಸಿಂಧೂರಿ ಸರಿಪಡಿಸಿಕೊಳ್ಳಬೇಕು. ಸಿಂಧೂರಿ ತಮ್ಮ ನಡವಳಿಕೆ ಸರಿ ಮಾಡಿಕೊಂಡರೆ ಅವರು ಒರ್ವ ಉತ್ತಮ ಅಧಿಕಾರಿ.ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಮೈಸೂರಿನ ಭೂ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಅವರು ಯಾಕೆ ಈತನಕ ಒಂದೇ ಒಂದು ಎಫ್ ಐ ಆರ್ ಮಾಡಿಲ್ಲ ಎಂದು ಮಾಜಿ ಶಾಸಕ ಎ.ಮಂಜು ಪ್ರಶ್ನಿಸಿದರು.ಎಲ್ಲರೂ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಆದ್ರೆ ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿ ದಂಧೆ ಮಾಡಬಾರದು. ಎಷ್ಟೋ ಅಧಿಕಾರಿಗಳು ಮೈಸೂರಿಗೆ ಬಂದು ಹೋಗಿದ್ದಾರೆ. ಈವರೆಗೂ ಭೂ ಮಾಫಿಯಾದವರ ವಿರುದ್ಧ ಎಫ್ ಐ ಆರ್ ಆಗಿಲ್ಲ ಯಾಕೆ. ಭೂ ಮಾಫಿಯಾ ಮಾಡಿದ್ದಾರೆ ಅಂತಾ ಡಿಸಿಯಾಗಿದ್ದ ರೋಹಿಣಿ ಹೇಳಿದ್ದಾರೆ. ಆದ್ರೆ ಅವ್ರ ಮೇಲೆ ಎಫ್ ಐ ಆರ್ ಯಾಕೆ ಮಾಡಿಸಿಲ್ಲ. ಕೇವಲ ಪ್ರಚಾರಕ್ಕೆ ಮಾಡೋದಲ್ಲ. ಸಾರ್ವಜನಿಕ ಆಸ್ತಿ, ಸರ್ಕಾರದ ಆಸ್ತಿಯ ಬಗ್ಗೆ ಆನ್ ರೆಕಾರ್ಡ್ ಇರುತ್ತದೆ. ನಾನು ಯಾರ ಪರವೂ ,ವಿರುದ್ಧವೂ ಮಾತನಾಡಲ್ಲ.ರಾಜಕಾರಣಿಗಳು ಸಂಬಂಧಿಕರು ರಿಯಲ್ ಎಸ್ಟೇಟ್ ನಲ್ಲಿ ಆಸ್ತಿ ಮಾಡುವ ರೀತಿ, ಅಧಿಕಾರಿಗಳ ನೆಂಟರು, ಸಂಬಂಧಿಕರ ಹೆಸ್ರಲ್ಲಿ ಆಸ್ತಿ ಮಾಡಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಹೊರಗೆ ಬರುತ್ತದೆ.ಕೆರೆ , ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡ್ಬೇಕು ಅಂತ ರೋಹಿಣಿ ಸಿಂಧೂರಿ ಹೇಳಿಕೊಂಡಿದ್ದಾರೆ. ಆದರೆ, ಹಾಸನದಲ್ಲಿ ಕೆರೆ ಉಳುವಿಗಾಗಿ ಜನರೇ ಸ್ವಂತ ಹಣದಲ್ಲಿ ಕೆರೆ ನಿರ್ಮಿಸಲು ಮುಂದಾಗಿದ್ದರು. ಆಗ ರೋಹಿಣಿ ಸಿಂಧೂರಿಯೇ ಹಾಸನದ ಡಿಸಿಯಾಗಿದ್ರು. ಈ ಸಂಬಂಧ ಜನತೆ ಅಹ್ವಾನ ನೀಡಿದ್ದ ವೇಳೆ ಕೆರೆ ಬಳಿ ಬಂದು ಕಾರಿಂದ ಕೆಳಗೆ ಇಳಿಯಲೇ ಇಲ್ಲ ಎಂದರು. . “ ’: . , 12, 201 (..): “ ’ . ,” . . , “ , ’ . . . , .”“ . ’ ,” . , “ . . . ? , ? , , . .” . , , .“ . . . ’ ,” .: . / / / / / : -------