ಮೈಸೂರಿನಲ್ಲಿ ಲಾಕ್ ಡೌನ್ ಮುಂದುವರಿಕೆ ಬಗ್ಗೆ ಚರ್ಚಿಸಿ ನಿರ್ಧಾರ- ಸಚಿವ ಎಸ್.ಟಿ ಸೋಮಶೇಖರ್. ಮೈಸೂರು,ಜೂನ್,11,2021(..):ಮೈಸೂರಿನಲ್ಲಿ ಲಾಕ್‌ ಡೌನ್ ಮುಂದುವರಿಸುವ ಕುರಿತು ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು. ಈ ಬಗ್ಗೆ ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಜೂ ನ್14ರವರೆಗೂ ಸರ್ಕಾರದ ನಿಯಮಗಳ‌ ಅನುಸಾರ ಲಾಕ್‌ಡೌನ್ ಇರಲಿದೆ. ಜೂನ್ 14 ರ ನಂತರ ಈ ಬಗ್ಗೆ ಚರ್ಚೆ ಮಾಡಿ‌ ನಿರ್ಧಾರ ಮಾಡುತ್ತೇವೆ. ಮೈಸೂರು‌ ಜಿಲ್ಲೆಯ‌ ಪರಿಸ್ಥಿತಿ ಅವಲೋಕಿಸಿ‌ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು. ಮೃಗಾಲಯದ ಪರ ನಟ ದರ್ಶನ್ ಅಭಿಯಾನ ಆರಂಭಿಸಿರುವ ಹಿನ್ನೆಲೆ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಸಚಿವ ಎಸ್ ಟಿ ಸೋಮಶೇಖರ್ ಧನ್ಯವಾದ ತಿಳಿಸಿದರು. ನಟ ದರ್ಶನ್ ಸಂಕಷ್ಟ ಕಾಲದಲ್ಲಿ ನೆರವಾಗಿದ್ದಾರೆ. ಈ ಮೂಲಕ ಮೃಗಾಲಯಕ್ಕೆ ಸಾಕಷ್ಟು ಸಹಾಯವಾಗಿದೆ ಎಂದರು. : - - – –- - .