ರಶ್ಮಿಕಾ ಟ್ವೀಟ್ ಗೆ ಫ್ಯಾನ್ಸ್ ಫಿದಾ! ಬೆಂಗಳೂರು, ಜೂನ್ 11, 2021 (..):ನಟಿ ರಶ್ಮಿಕಾ ಮಂದಣ್ಣ ಟ್ವಿಟರ್ ನಲ್ಲಿ ಹಂಚಿಕೊಂಡ ಆಲೋಚನೆಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. “ನನ್ನ ಸ್ನೇಹಿತರೊಬ್ಬರು ನನಗೆ ಹೇಳಿದ್ದರು ಮತ್ತು ಎಲ್ಲವನ್ನು ನಾನು ನಿಮಗೆ ಹೇಳಬೇಕಾದ ಅಗತ್ಯವಿದೆ ಅನಿಸಿತು. ನಿಮಗೆ ಸಂತೋಷ ಅಥವಾ ಹಣ ಅಥವಾ ಜ್ಞಾನ ಕೊಡುವುದರೊಂದಿಗೆ ಸಮಯ ಕಳೆಯಿರಿ..ಮತ್ತೇನಿಲ್ಲ..!ಎಂದು ಟ್ವಿಟ್ ಮಾಡಿದ್ದಾರೆ. ಅಂದಹಾಗೆ ಕೋವಿಡ್ ಸಾಂಕ್ರಾಮಿಕದ ಸಂಕಷ್ಟ ಸಮಯದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳನ್ನು ಹುರಿದುಂಬಿಸಲು ಸಕಾರಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ರಶ್ಮಿಕಾ ಟ್ವೀಟ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಕಷ್ಟು ಮಂದಿ ಲೈಕ್, ರೀ ಟ್ವೀಟ್ ಮಾಡುತ್ತಿದ್ದಾರೆ.