ಡಿಸಿಗಳಿಂದ ಲಾಕ್ ಡೌನ್ ಮುಂದುವರಿಕೆಗೆ ಮನವಿ: ಇಂದು ಅಥವಾ ನಾಳೆ ಅಂತಿಮ ತೀರ್ಮಾನ- ಡಿಸಿಎಂ ಅಶ್ವಥ್ ನಾರಾಯಣ್. ಬೆಂಗಳೂರು,ಜೂನ್,10,2021(..):ಕೊರೋನಾ ಹರಡದಂತೆ ತಡೆಯಲು ಜಾರಿಗೊಳಿಸಲಾಗಿರುವ ಲಾಕ್ ಡೌನ್ ಅನ್ನು ಮುಂದುವರೆಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಹೀಗಾಗಿ ಅನ್ ಲಾಕ್ ಮಾಡುವ ಬಗ್ಗೆ ಇಂದು ಅಥವಾ ನಾಳೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು. ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಡಿಸಿಗಳು ಲಾಕ್ ಡೌನ್ ಮುಂದುವರಿಸುವಂತೆ ಹೇಳಿದ್ದಾರೆ. ಹಾಗೆಯೇ ಕೈಗಾರಿಕಾ, ರಫ್ತು ಕ್ಷೇತ್ರಗಳಿಗೆ ಅವಕಾಶ ನೀಡವಂತೆ ತಿಳಿಸಿದ್ದಾರೆ. ಇಂದು ಸಿಎಂ ಜತೆ ಸಭೆ ಇದೆ. ಅನ್ ಲಾಕ್ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ನಂತರ ಇಂದು ಅಥವಾ ನಾಳೆ ಅನ್ ಲಾಕ್ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದರು. ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ್, ರಾಜಕೀಯ ವಿಚಾರಗಳನ್ನ ಬಹಿರಂಗವಾಗಿ ಮಾತನಾಡಬಾರದು ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಯಾವ ಶಾಸಕರು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಬಹಿರಂಗವಾಗಿ ಯಾವ ಶಾಸಕರೂ ಮಾತನಾಡಿಲ್ಲ. ಆರ್.ಅಶೋಕ್ ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನ ಅವರನ್ನೇ ಕೇಳಿ ಎಂದು ತಿಳಿಸಿದರು. : - - –- - - - .