ಯೂಟ್ಯೂಬ್’ನಲ್ಲಿ ದಾಖಲೆ ಬರೆದ ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಬೆಂಗಳೂರು, ಜೂನ್ 09, 2021 (..):ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾದ ಟೀಸರ್ ಹೊಸ ದಾಖಲೆ ಬರೆದಿದೆ. ಹೌದು. ಒಂದೇ ದಿನದಲ್ಲಿ ಇಪ್ಪತ್ತು ಮಿಲಿಯನ್ ವೀಕ್ಷಣೆಯನ್ನು ಪಡೆಯುವ ಮೂಲಕ 777 ಚಾರ್ಲಿ ‘ ಟೀಸರ್ ಸಾಕಷ್ಟು ಸದ್ದು ಮಾಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಟೀಸರ್ ಬಿಡುಗಡೆ ಮಾಡಲಾಗಿತ್ತು. ಚಿತ್ರವನ್ನು ಕಿರಣ ರಾಜ್ ನಿರ್ದೇಶನ ಮಾಡಿದ್ದು , ಲಾಕ್ ಡೌನ್ ಬಳಿಕ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂದಹಾಗೆ ಈ ಐದೂ ಟೀಸರ್‌ಗಳು ಒಂದೇ ದಿನದಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿವೆ.