ಫುಟ್ಬಾಲ್: ಲಿಯೋನೆಲ್ ಮೆಸ್ಸಿ ದಾಖಲೆ ಮುರಿದ ಭಾರತದ ಸುನಿಲ್ ಚೆಟ್ರಿ ಬೆಂಗಳೂರು, ಜೂನ್ 08, 2021 (..):ಭಾರತದ ಸುನಿಲ್ ಚೆಟ್ರಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ದಾಖಲೆ ಮುರಿದಿದ್ದಾರೆ. ಹೌದು. ದೋಹಾದಲ್ಲಿ ಬಾಂಗ್ಲಾದೇಶ ವಿರುದ್ಧ 2-0 ಗೋಲುಗಳಿಂದ ಜಯಗಳಿಸಿದ ಭಾರತದ ತಂಡದ ಸುನಿಲ್ ಚೆಟ್ರಿ ಎರಡನೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್ ಗಳಿಸಿದ ಫುಟ್ಬಾಲ್ ಪಟು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಚೆಟ್ರಿ 74 ಗೋಲುಗಳೊಂದಿಗೆ ಈ ಸಾಧನೆ ಮಾಡಿದ್ದಾರೆ. 36 ವರ್ಷದ ಸ್ಟ್ರೈಕರ್ ಅಂತರರಾಷ್ಟ್ರೀಯ ಗೋಲ್ ಗಳಿಸಿದ ಸಕ್ರಿಯ ಕ್ರೀಡಾಪಋಗಳ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (103) ನಂತರದ ಸ್ಥಾನದಲ್ಲಿದ್ದಾರೆ. ಸಾರ್ವಕಾಲಿಕ ಗೋಲು ಗಳಿಸಿದ ಪುರುಷರ ಪಟ್ಟಿಯಲ್ಲಿ ಚೆಟ್ರಿ ಕೂಡ ಸ್ಥಾನ ಪಡೆದಿದ್ದಾರೆ ಮತ್ತು ಈಗ 11 ನೇ ಸ್ಥಾನದಲ್ಲಿದ್ದಾರೆ.