ರೋಹಿಣಿ ಸಿಂಧೂರಿ ಆದೇಶಕ್ಕೆ ಸೆಡ್ಡು ಹೊಡೆದ ನೂತನ ಡಿಸಿ ಡಾ.ಬಗಾದಿ ಗೌತಮ್: ಸಂಪೂರ್ಣ ಲಾಕ್ ಡೌನ್ ಆದೇಶ ವಾಪಸ್. ಮೈಸೂರು,ಜೂನ್,7,2021(..):ಕೊರೋನಾ ಹಿನ್ನೆಲೆ ಮೈಸೂರು ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಅವರು ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನ ಇದೀಗ ನೂತನ ಡಿಸಿ ಡಾ.ಬಗಾದಿ ಗೌತಮ್ ಹಿಂಪಡೆದಿದ್ದಾರೆ. ನಾಳೆಯಿಂದ 08/06/2021ರಿಂದ ಸರ್ಕಾರದ ಆದೇಶದ ನಿಯಮದಂತೆ ಬೆಳಗ್ಗೆ 06 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೂ ಅಗತ್ಯವ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದ್ದು ಈ ಕುರಿತು ಜಿಲ್ಲಾಧಿಕಾರಿ ಡಾ || ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಜೂನ್ 14 ರವರೆಗೂ ಇದೇ ಆದೇಶ ಮುಂದುವರೆಯಲಿದೆ. ಈ ಮೂಲಕ ಮೈಸೂರಿನಲ್ಲಿ ಲಾಕ್ಡೌನ್ ಮತ್ತಷ್ಟು ಸಡಿಲಿಕೆಯಾಗಿದೆ. ನಾಳೆಯಿಂದ ಜೂನ್ 14ರವರೆಗೆ ಪ್ರತಿದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ವರ್ಗಾವಣೆಗೂ ಮುನ್ನ ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶವನ್ನ ನೂತನ ಡಿಸಿ ಬಗಾದಿ ಗೌತಮ್ ವಾಪಸ್ ಪಡೆದಿದ್ದಾರೆ. ಈ ಹಿಂದೆ ವಾರದಲ್ಲಿ ಮೂರು ದಿನ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಿ ರೋಹಿಣಿ ಸಿಂಧೂರಿ ಆದೇಶಿದ್ದರು. ಇದೀಗ ಆದೇಶ ಹಿಂಪಡೆಯುವ ಮೂಲಕ ರೋಹಿಣಿ ಸಿಂಧೂರಿಗೆ ನೂತನ ಡಿಸಿ ಬಗಾದಿ ಗೌತಮ್ ಸೆಡ್ಡು ಹೊಡೆದಿದ್ದಾರೆ. : - - . ,--- – .