ಸಿಎಂ ಬದಲಾವಣೆ ಪ್ರಸ್ತಾಪ ಹೈಕಮಾಂಡ್ ಮುಂದೆ ಇಲ್ಲ- ಸಚಿವ ಭೈರತಿ ಬಸವರಾಜು. ಬೆಂಗಳೂರು,ಜೂನ್,7,2021(..):ಸಿಎಂ ಬದಲಾವಣೆ ಪ್ರಸ್ತಾಪ ಹೈಕಮಾಂಡ್ ಮುಂದೆ ಇಲ್ಲ.ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯಾಗುವುದಿಲ್ಲ ಎಂದು ಸಚಿವ ಭೈರತಿ ಬಸವರಾಜು ತಿಳಿಸಿದ್ದಾರೆ. ಸಿಎಂ ಮನೆ ಮುಂದೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಭೈರತಿ ಬಸವರಾಜು, ಕೊರೊನಾ ಸಮಯದಲ್ಲಿ ಸಿಎಂ ಬಿಎಸ್ ವೈ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅನಭವವಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಎಂ ಬಗ್ಗೆ ಕೆಲವರು ಏನೇನೋ ಮಾತಾಡ್ತಿದಾರೆ. ಇದರಿಂದ ಸಿಎಂ ಮನನೊಂದು ಅಂಥ ಹೇಳಿಕೆ ಕೊಟ್ಟಿರಬಹುದು. ಯಡಿಯೂರಪ್ಪ ರನ್ನು ಬದಲಾಯಿಸುವ ಪ್ರಸ್ತಾಪ ಹೈಕಮಾಂಡ್ ಮುಂದೆ ಇಲ್ಲ. ಮುಂದಿನ 2 ವರ್ಷ ಬಿಎಸ್ ವೈ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ತಿಳಿಸಿದರು. ಸಿಎಂ ವಿರುದ್ಧ ವಿರೋಧಿ ಹೇಳಿಕೆ ಕೊಡುತ್ತಿರುವವರ ಬಗ್ಗೆ ನಾನು ಏನೂ ಮಾತಾಡಲ್ಲ. ಕೆಲವೇ ದಿನಗಳಲ್ಲಿ ನಮ್ಮ ಉಸ್ತುವಾರಿ ಅರುಣ್ ಸಿಂಗ್ ಬರ್ತಾರೆ. ಅರುಣ್ ಸಿಂಗ್ ಎಲ್ಲರ ಜತೆ ಚರ್ಚೆ ಮಾಡ್ತಾರೆ ಹೈಕಮಾಂಡ್ ಗೆ ಯಡಿಯೂರಪ್ಪನವರ ಮೇಲೆ ನಂಬಿಕೆ ಇದೆ. ಹಾಗಾಗಿಯೇ ಹೈಕಮಾಂಡ್ ‌ಮೌನವಾಗಿದೆ ಎಂದು ಸ್ಪಷ್ಟಪಡಿಸಿದರು. : - - - – - -