ಸರಳವಾಗಿ ಸಪ್ತಪದಿ ತುಳಿದ ನಟಿ ಯಾಮಿ ಗೌತಮ್ ಬೆಂಗಳೂರು, ಜೂನ್ 05, 2021 (..):ಲಾಕ್ ಡೌನ್ ಕಾಲದಲ್ಲಿ ನಟಿ ಯಾಮಿ ಗೌತಮ್ ಸರಳವಾಗಿ ಸಪ್ತಪದಿ ತುಳಿದಿದ್ದಾರೆ. ಹೌದು. ನಿರ್ದೇಶಕ ಆದಿತ್ಯಾ ಧಾರ್‌ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ನಟಿ ಯಾಮಿ. ಮದುವೆಯ ಫೋಟೋವೊಂದನ್ನು ಯಾಮಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರೇಮ ಹಾಗೂ ಸ್ನೇಹದ ಹೊಸ ಪಯಣಕ್ಕೆ ಕಾಲಿಡುತ್ತಿರುವ ನಾವು ನಿಮ್ಮ ಹಾರೈಕೆಗಳು ಹಾಗು ಆಶೀರ್ವಾದ ಬಯಸುತ್ತೇವೆ ಎಂದು ಯಾಮಿ ಬರೆದುಕೊಂಡಿದ್ದಾರೆ.