ದೇಣಿಗೆ ಕುರಿತ ಸ್ಪಷ್ಟನೆ ನೀಡಿದ ಉಪೇಂದ್ರ ಬೆಂಗಳೂರು, ಜೂನ್ 05, 2021 (..):ಕೊರೊನಾ ಸಂಕಷ್ಟ ಕಾಲದಲ್ಲಿ ನೆರವು ನೀಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ದೇಣಿಗೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇನ್ನು ಮುಂದೆ ಯಾರಿಗಾದರೂ ಸಹಾಯ ಮಾಡಬೇಕೆಂದಿದ್ದರೆ ನೇರವಾಗಿ ನೀವೇ ಮಾಡಿ. ನಮ್ಮ ಫೌಂಡೇಷನ್ ಗೆ ದೇಣಿಗೆ ಕೊಡಬೇಡಿ ಎಂದು ಉಪ್ಪಿ ಮನವಿ ಮಾಡಿದ್ದಾರೆ. ಇನ್ನು ಮುಂದೆ ಹಣ, ಕೊಡುಗೆಗಳನ್ನು ಸ್ವೀಕರಿಸುವುದನ್ನು ನಾವು ನಿಲ್ಲಿಸುತ್ತಿದ್ದೇವೆ. ಇದುವರೆಗೆ ಉಪ್ಪಿ ಫೌಂಡೇಷನ್ ಗೆ ಹರಿದುಬಂದ ಹಣ, ಖರ್ಚಿನ ವಿವರಗಳನ್ನು ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.