ಡಾರ್ಲಿಂಗ್ ಕೃಷ್ಣ ಫ್ಯಾನ್ಸ್’ಗೆ ಗುಡ್ ನ್ಯೂಸ್! ಶುಗರ್ ಫ್ಯಾಕ್ಟರಿ ಟೀಸರ್ ರಿಲೀಸ್’ಗೆ ಡೇಟ್ ಫಿಕ್ಸ್! ಬೆಂಗಳೂರು, ಜೂನ್ 04, 2021 (..):ಲವ್ ಮಾಕ್ಟೇಲ್ ಚಿತ್ರದ ಮೂಲಕ ಮತ್ತೆ ಫಾರ್ಮ್ ಗೆ ಮರಳಿರುವ ಟೀಸರ್ ಕೃಷ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೌದು. ಶುಗರ್ ಫ್ಯಾಕ್ಟರಿ ಸಿನಿಮಾ ಟೀಸರ್ ಕೃಷ್ಣ ಬರ್ತ್ ಡೇಗೆ ರಿಲೀಸ್ ಆಗಲಿದೆ. ಜೂನ್ 12 ರಂದು ಟೀಸರ್ ಲಾಂಚ್ ಮಾಡಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಚಿತ್ರದಲ್ಲಿ ನಾಯಕಿಯಾಗಿ ಸೊನಾಲ್ ಮೊಂಟಾರಿಯೋ, ಶಿಲ್ಪಾ ಶೆಟ್ಟಿ ಇತರರು ನಟಿಸಿದ್ದಾರೆ. ಲಾಕ್ ಡೌನ್ ಗೂ ಮೊದಲು ಚಿತ್ರತಂಡ ಗೋವಾದಲ್ಲಿ ಪ್ರಮುಖ ದೃಶ್ಯಗಳು, ಹಾಡುಗಳ ಚಿತ್ರೀಕರಣ ನಡೆಸಿತ್ತು.