ಪರೀಕ್ಷೆ ನಡಸದೇ ಪಾಸ್ ಮಾಡಿದರೇ ತೊಂದರೆಯಾಗುತ್ತೆ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್. ಬೆಂಗಳೂರು,ಜೂನ್,4,2021(..): ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸುದಾಕರ್, ಪರೀಕ್ಷೆ ನಡಸದೇ ಪಾಸ್ ಮಾಡಿದರೇ ತೊಂದರೆಯಾಗುತ್ತೆ ಎಂದಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ವಿದ್ಯಾರ್ಥಿಗಳ ರಕ್ಷಣೆ ಸರ್ಕಾರದ ಕರ್ತವ್ಯ. ಪ್ರಧಾನಿ ಮೋದಿ ಸಿಬಿಎಸ್ ಸಿ, ಐಸಿಎಸ್ ಸಿ ಪರೀಕ್ಷೆಗಳನ್ನ ರದ್ದು ಮಾಡಿದ್ದಾರೆ. ಅವರಿಗೆ ಸೆಮಿಸ್ಟರ್ ಲೆಕ್ಕದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಆದರೆ ನಮಗೆ ಆ ಅವಕಾಶ ಇಲ್ಲ. ಮೌಲ್ಯಮಾಪನ ಹೇಗೆ ಮಾಡಬೇಕು ಎಂದು ಚರ್ಚಿಸಬೇಕು ಎಂದರು. : -- -- – . . .