ಕಲಾವಿದರ ಖಾತೆಗೆ ಬಂದು ಸೇರುತ್ತಿದೆ ಯಶ್ ಘೋಷಿಸಿದ ನೆರವು ಬೆಂಗಳೂರು, ಜೂನ್ 04, 2021 (..):ಪ್ರಕಟಿಸಿದಂತೆ ಹಲವಾರು ಕಾರ್ಮಿಕರು, ಕಲಾವಿದರ ಖಾತೆಗಳಿಗೆ 5000 ಹಣ ಜಮಾವಣೆ ಮಾಡಿದ್ದಾರೆ ನಟ ಯಶ್. ಹೌದು. ಖಾತೆಗೆ ಯಶ್ ಹಾಕಿರುವ ಹಣ ಬಂದಿರುವುದಾಗಿ ಕಲಾವಿದರು ಖಾತ್ರಿ ಪಡಿಸಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣ ಮೂಲಕ ಯಶ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ಸಿನಿಮಾ ಕಾರ್ಮಿಕರ ಹಾಗೂ ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸಿರುವ ನಟ ಯಶ್ ಎಲ್ಲ ಖಾತೆಗೆ ತಲಾ ಐದು ಸಾವಿರ ರೂ. ಹಾಕುವುದಾಗಿ ಪ್ರಕಟಿಸಿದ್ದರು. ಅದರಂತೆ ನೆರವು ಕಾರ್ಯ ಆರಂಭಿಸಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಕಲಾವಿದರಿಗೆ 5000 ಹಣವನ್ನು ಖಾತೆಗೆ ಹಾಕುವುದಾಗಿ ಯಶ್ ಹೇಳಿದ್ದರು.