: ಅರಮನೆಗೆ ಈ ದಿನಗಳಂದು ಪ್ರವೇಶ ಇಲ್ಲ. ಮೈಸೂರು, ಸೆ.26,2024: (..) ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಿರ್ದಿಷ್ಟ ದಿನ, ಸಮಯದಂದು ಅಂಬಾವಿಲಾಸ ಅರಮನೆಗೆ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ. ಅಂಬಾವಿಲಾಸ ಅರಮನೆಯಲ್ಲಿ ರಾಜಮನೆತನದವರ ಧಾರ್ಮಿಕ ಪೂಜಾ ಕೈಂಕರ್ಯ ಹಿನ್ನೆಲೆ. ಸೆ.27 ರಂದು ಸಿಂಹಾಸನ ಜೋಡಣೆ ಪ್ರಯುಕ್ತ ಬೆ.10 ರಿಂದ ಮ.1 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಅ.3 ರಂದು ಯದುವೀರ್ ಒಡೆಯರ್ ಅವರ ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಮ. 2 ರವರೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ. ಅ.11 ಹಾಗೂ 12 ರಂದು ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಇಡೀ ದಿನ ಅರಮನೆಗೆ ಪ್ರವೇಶವಿಲ್ಲ. ಅ.27 ರಂದು ಸಿಂಹಾಸನ ವಿಸರ್ಜನೆ ಪ್ರಯುಕ್ತ ಅಂದು ಬೆ.10 ರಿಂದ ಮ.1 ರವರೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಿಕೆ ಅರಮನೆಗೆ ಸಾರ್ವಜನಿಕ ಪ್ರವೇಶದ ನಿರ್ಬಂಧ ಕುರಿತು ಮೈಸೂರು ಅರಮನೆ ಆಡಳಿತ ವತಿಯಿಂದ ಪ್ರಕಟಣೆ‌. : , , , . : : .