ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಇಂಜಿನಿಯರ್ ಕೊರೋನಾಗೆ ಬಲಿ. ಮೈಸೂರು,ಜೂನ್,3,2021(..):ಎರಡು ತಿಂಗಳು ಹಿಂದಷ್ಟೇ ವಿವಾಹವಾಗಿದ್ದ ಮೈಸೂರಿನ ಇಂಜಿನಿಯರ್ ಕೊರೋನಾಗೆ ಬಲಿಯಾಗಿದ್ದಾರೆ. ನವೀನ್ ಕುಮಾರ್ ಕರೋನಾಗೆ ಬಲಿಯಾದ ಇಂಜಿನಿಯರ್. ನವೀನ್ ಕುಮಾರ್ ಮೈಸೂರಿನ ಆಲನಹಳ್ಳಿ ಬಡಾವಣೆ ನಿವಾಸಿಯಾಗಿದ್ದು, ಬೆಂಗಳೂರಿನ ಜೈನ್ ವಿವಿಯಲ್ಲಿ ಕೆಲಸ‌ ಮಾಡುತ್ತಿದ್ದರು. ಈ ನಡುವೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನವೀನ್ ಈ ವೇಳೆ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದರು. ಮೈಸೂರಿಗೆ ಬಂದ ವೇಳೆ ನವೀನ್ ಕುಮಾರ್ ಕೊರೋನಾ ತಪಾಸಣೆ ಮಾಡಿಸಿದ್ದರು. ಈ ವೇಳೆ ನವೀನ್‌ ಗೆ ಪಾಸಿಟಿವ್ ಎಂದು ವರದಿ ಬಂದಿದೆ. ಬಳಿಕ ನವೀನ್ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ನವೀನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. : ---