ಉದ್ಯಮಿ ಜತೆ ಸಪ್ತಪದಿ ತುಳಿದ ನಟಿ ಪ್ರಣಿತಾ ಬೆಂಗಳೂರು, ಜೂನ್ 02, 2021 (..):ನಟಿ ಪ್ರಣಿತಾ ಸುಭಾಷ್ ಉದ್ಯಮಿ ನಿತಿನ್ ರಾಜು ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆ ತುಂಬಾ ಸರಳವಾಗಿ ನಡೆದಿದೆ. ವಿವಾಹ ಸಮಾರಂಭದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಪ್ರಣಿತಾ ಹಂಚಿಕೊಂಡಿದ್ದಾರೆ. ಮೂಲತಃ ಬೆಂಗಳೂರು ನಿವಾಸಿಯಾಗಿರುವ ಪ್ರಣಿತಾ ಪತಿ ನಿತಿನ್, ಮಾಲ್‍ವೊಂದರ ಮಾಲೀಕರೂ ಆಗಿದ್ದು ಉದ್ಯಮಿಯಾಗಿದ್ದಾರೆ. ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಅತ್ಯಾಪ್ತರ ಸಮ್ಮುಖದಲ್ಲಿ ಸರಳವಾಗಿ ಪ್ರಣಿತಾ ಮದುವೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ.