ದಳಪತಿ ವಿಜಯ್ 66ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ನಿರ್ದೇಶಕ ಯಾರು ಗೊತ್ತಾ?! ಬೆಂಗಳೂರು, ಮೇ 31, 2021 (..):ನಿರ್ದೇಶಕ ವಂಶಿ ಪೈಡಿಪಲ್ಲಿ ದಳಪತಿ ವಿಜಯ್​ 66ನೇ ಚಿತ್ರಕ್ಕೆ ಆಯಕ್ಷನ್​ ಕಟ್​ ಹೇಳಲಿದ್ದಾರೆ. ತೆಲುಗಿನಲ್ಲಿ ‘ಮಹರ್ಷಿ’ಯಂಥ ಹಿಟ್​ ಸಿನಿಮಾಗಳನ್ನು ನಿರ್ದೇಶನ ಮಾಡಿದ ವಂಶಿ ಪೈಡಿಪಲ್ಲಿ ವಿಜಯ್ ಚಿತ್ರಕ್ಕೆ ನಿರ್ದೇಶನ ಮಾಡುವ ವಿಷಯ ಅಧಿಕೃತವಾಗಿದೆ. ವಿಜಯ್ ನಟನೆಯ ಇತ್ತೀಚಿನ ಸಿನಿಮಾಗಳು ಡಬ್​ ಆಗಿ ತೆಲುಗಿನಲ್ಲಿ ರಿಲೀಸ್​ ಆಗುತ್ತಿತ್ತು. ಆದರೆ, ಈ ಬಾರಿ ತಮಿಳು ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ಸಿದ್ಧಪಡಿಸಲು ನಿರ್ಮಾಪಕ ದಿಲ್​ ರಾಜು ಚಿಂತನೆ ನಡೆಸಿದ್ದಾರೆ. ಜೂನ್​ 22 ವಿಜಯ್​ ಜನ್ಮದಿನ. ಈ ವಿಶೇಷ ದಿನದಂದು ಚಿತ್ರತಂಡ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲು ಚಿಂತಿಸಿದೆ ಎನ್ನಲಾಗಿದೆ.