ವಿಮಾನ ದುರಂತ: ಹಾಲಿವುಡ್ ನಟ ಜೋ ಲಾರಾ ದಂಪತಿ ಸೇರಿ 7 ಮಂದಿ ಸಾವು ಬೆಂಗಳೂರು, ಮೇ 31, 2021 (..):ಹಾಲಿವುಡ್ ನಟ ಜೋ ಲಾರಾ ವಿಮಾನ ದುರಂತದಲ್ಲಿ ನಿಧನರಾಗಿದ್ದಾರೆ. ಈ ವಿಮಾನದಲ್ಲಿ ಜೋ ಲಾರಾ ಮತ್ತು ಅವರ ಪತ್ನಿ ಸೇರಿ ಒಟ್ಟು 7 ಮಂದಿ ಪ್ರಯಾಣ ಮಾಡುತ್ತಿದ್ದರು. ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಖಾಸಗಿ ಜೆಟ್​ ಪತನವಾಗಿದೆ ಎಂದು ವರದಿ ಆಗಿದೆ. ಅಪಘಾತಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ. ಜೋ ಲಾರಾ ಮತ್ತು ಅವರ ಪತ್ನಿ ಜೊತೆ ಪ್ರಯಾಣಿಸುತ್ತಿದ್ದ ಇನ್ನುಳಿದವರೆಲ್ಲ ಸ್ಥಳೀಯರು ಎಂದು ಹೇಳಲಾಗಿದೆ. ಜೋ ಲಾರಾ ಪತ್ನಿ ವೃತ್ತಿಪರ ಡಯಟೀಶಿಯನ್​ ಆಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.