ಎನ್ ಡಿಎ-2: ಮೋದಿ ಸರಕಾರಕ್ಕೆ ಇಂದಿಗೆ ಎರಡು ವರ್ಷ, ಕೊರೊನಾ ಸಂಕಷ್ಟದಲ್ಲಿಲ್ಲ ಸಂಭ್ರಮ ಬೆಂಗಳೂರು, ಮೇ 30,2021 (..):ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ-2 ಸರ್ಕಾರ ಇಂದಿಗೆ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿದೆ. ಕೊರೊನಾ ಕಂಟಕದ ಹಿನ್ನೆಲೆಯಲ್ಲಿ ಈ ಬಾರಿ ಮೋದಿ ಸರ್ಕಾರದ ಸಂಪುಟ ಸಚಿವರು ಆಚರಣೆಯ ಸಂಭ್ರಮದಲ್ಲಿಲ್ಲ. ಕಳೆದ ಎರಡು ತಿಂಗಳಿನಿಂದ ದೇಶಾದ್ಯಂತ ಹಲವು ಜನರ ಸಾವು-ನೋವುಗಳಾಗಿವೆ. ಹೀಗಾಗಿ ಬಿಜೆಪಿ ಪಾಳಯದಲ್ಲಿ ಸಂಭ್ರಮದ ಕಳೆಯಿಲ್ಲ. ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರದ ಮೋದಿ ಸರ್ಕಾರ ವಿಫಲವಾಗಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಹೀಗಾಗಿ ಬಿಜೆಪಿ ಈ ಬಾರಿ ಸರ್ಕಾರದ ವರ್ಷಾಚರಣೆಯನ್ನು ಇಂದು ಅಭಿವೃದ್ಧಿ ಕೆಲಸಕ್ಕೆ ಮೀಸಲಿಡಲು ತೀರ್ಮಾನಿಸಿದೆ.