ದೆಹಲಿಗೆ ಮೊನ್ನೆ ಕೆಲವರು ಬಂದಿದ್ರು: ನಾಯಕತ್ವ ಬದಲಾವಣೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು ಹೀಗೆ? ಹುಬ್ಬಳ್ಳಿ,ಮೇ,29,2021(..):ರಾಜ್ಯದಲ್ಲಿ ಸಿಎಂ ಬದಲಾವಣೆಗೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವ ಬಗ್ಗೆ ಸುದ್ದಿಯಾದ ಹಿನ್ನೆಲೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಿಎಸ್ ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವಯಸ್ಸಿನ ಕಾರಣ ಹೇಳಿ ಕೆಳಗಿಳಿಸುವುದು ಸೂಕ್ತವಲ್ಲ ಎಂದಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ದೆಹಲಿಗೆ ಮೊನ್ನೆ ಕೆಲವರು ಬಂದಿದ್ರು. ಆದರೇ ಅವರು ಎಲ್ಲಿಗೆ ಹೋದರು. ಯಾರನ್ನ ಭೇಟಿ ಮಾಡಿದರು ಗೊತ್ತಿಲ್ಲ. ಕೋವಿಡ್ ಮತ್ತು ದೇಶದ ಆರ್ಥಿಕತೆಯೇ ನಮ್ಮ ಆದ್ಯತೆಯಾಗಿದೆ. ಹೀಗಾಗಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಬಿಎಸ್ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು. ನಾನು ಹುಬ್ಬಳ್ಳಿಯಲ್ಲಿದ್ದಾಗ ಹಲವು ಸಚಿವರು ಬಂದು ಭೇಟಿಯಾಗುತ್ತಾರೆ. ದೆಹಲಿಯಲ್ಲಿದ್ದಾಗಲೂ ಸಚಿವರು ಬಂದು ಭೇಟಿಯಾಗುತ್ತಾರೆ. ಆದರೆ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆದಿಲ್ಲ ಎಂದರು. ನಾಯಕತ್ವ ಬದಲಾಯಿಸಲು ಬಿಜೆಪಿಯಲ್ಲಿ ಸಮರ್ಥರು ಯಾರು ಸಿಕ್ಕಿಲ್ಲ. ಹೀಗಾಗಿ ಅವರ ಹೈಕಮಾಂಡ್ ಬಿಎಸ್ ವೈ ಅವರನ್ನೇ ಮುಂದುವರೆಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ, ಸಮರ್ಥರು ಅಂತಲೇ ಅವರು ಬಡಿದಾಡಿಕೊಳ್ತಿದ್ದಾರೆ ಎಂದು ಸಿದ್ಧರಾಮಯ್ಯ ಮತ್ತು ಡಿಕೆಶಿವಕುಮಾರ್ ರನ್ನ ಪರೋಕ್ಷವಾಗಿ ಟೀಕಿಸಿದರು. : - - – -