ಟಿಕ್ ಟಾಕ್ ಖಾತೆ ಬ್ಯಾನ್ ಮಾಡಿದ ಪಾಕ್ : ಟಾಂಗ್ ಕೊಟ್ಟ ಮಿಯಾ ಖಲೀಫಾ ಬೆಂಗಳೂರು, ಮೇ 28, 2021 (..):ಮಿಯಾ ಖಲೀಫಾ ಟಿಕ್ ಟಾಕ್​​ ಖಾತೆಯನ್ನು ಬ್ಯಾನ್​ ಮಾಡುವ ಮೂಲಕ ಶಾಕ್​ ನೀಡಿದೆ ಪಾಕಿಸ್ತಾನ. ಇದಕ್ಕೆ ಮಾಜಿ ಪೋರ್ನ್ ಸ್ಟಾರ್ ಖಡಕ್ ಆಗಿಯೇ ಟಾಂಗ್ ನೀಡಿದ್ದಾರೆ. ಮೌಲ್ಯವಿಲ್ಲದ ಹಾಗೂ ನೈತಿಕವಲ್ಲದ ಪೋಸ್ಟ್​ಗಳನ್ನು ಮಿಯಾ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ಇದಕ್ಕೆ ತಕ್ಕ ಪ್ರತ್ಯುತ್ತವನ್ನು ಮಿಯಾ ನೀಡಿದ್ದಾರೆ. ಟಿಕ್​ಟಾಕ್​ ಖಾತೆ ಬ್ಯಾನ್​ ಮಾಡಿದ ಪಾಕಿಸ್ತಾನಕ್ಕೆ ನನ್ನ ಶೌಟೌಟ್​. ಫ್ಯಾಸಿಸಂನಿಂದ ದೂರ ಉಳಿಯ ಬಯಸುವ ಪಾಕಿಸ್ತಾನಿ ಫ್ಯಾನ್ಸ್​ಗಾಗಿ ನಾನು ನನ್ನ ಟಿಕ್​ಟಾಕ್​ ವಿಡಿಯೋಗಳನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡುತ್ತೇನೆ ಎಂದಿದ್ದಾರೆ. ಅಂದಹಾಗೆ ಮಿಯಾ ಟಿಕ್​ಟಾಕ್​ನಲ್ಲಿ 2.2 ಕೋಟಿ ಹಿಂಬಾಲಕರನ್ನು ಹೊಂದಿದ್ದಾರೆ.