ಮುಂಬೈ ಬಿಟ್ಟು ಮನಾಲಿಗೆ ಬಂದ ಕಂಗನಾ ಬೆಂಗಳೂರು, ಮೇ 28, 2021 (..):ಮನಾಲಿಗೆ ವಾಪಸ್​ ಆಗಿರುವ ನಟಿ ಕಂಗನಾ ರಣಾವತ್​​ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದಾರೆ. ಬಿಳಿ ಬಣ್ಣದ ಕುರ್ತಾ ಧರಿಸಿರುವ ಕಂಗನಾ ಪಂಜಾಬ್​ ಸ್ಟೋರಿ ಎಂಬ ಪುಸ್ತಕವನ್ನ ಓದುತ್ತಿರುವ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈನಿಂದ ತವರೂರು ಮನಾಲಿಗೆ ಬಂದಿರುವ ಕಂಗನಾ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದಾರೆ. ಫೋಟೋಗೆ ಕಂಗನಾ ನೀಡಿರುವ ಕ್ಯಾಪ್ಸನ್ ಗಮನ ಸೆಳೆಯುತ್ತಿದೆ. “ಭಾರತದ ಇತಿಹಾಸ, ಸಂಘರ್ಷ ಹಾಗೂ ಕ್ರೂರ..ನೀವು ಯಾವುದಾದರೂ ಒಂದು ಕಡೆ ಸೇರಿದ್ರೆ ನೀವೊಬ್ಬರು ಮೂರ್ಖ. ಆದರೆ ನೀವು ಯಾವುದೇ ಕಡೆ ಸೇರದೇ ಹೋದಲ್ಲಿ ನೀವು ಶತಮೂರ್ಖರು ಎಂದು ಶೀರ್ಷಿಕೆ ನೀಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.