ನಮ್ಮ ಮುಂದೆ ಇರೋದು ಒಂದೇ ವಿಚಾರ: ಅದನ್ನ ಬಿಟ್ಟು ಬೇರೆ ವಿಚಾರ ಮಾತನಾಡಬಾರದು- ಸಚಿವ ಸುರೇಶ್ ಕುಮಾರ್. ಚಾಮರಾಜನಗರ,ಮೇ,28,2021(..):ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ತೆರೆಮರೆಯಲ್ಲಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ವಿಚಾರ ಬಹಿರಂಗಗೊಂಡ ತಕ್ಷಣ ಸಚಿವರು ಹಾಗೂ ಹಲವು ಶಾಸಕರು ಸಿಎಂ ಬಿಎಸ್ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದಾರೆ. ಈ ವಿಚಾರ ಕುರಿತು ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್,ನಮ್ಮ ಮುಂದೆ ಇರೋದು ಒಂದೇ ವಿಚಾರ. ಕೊರೋನಾ ವಿರುದ್ಧ ಹೋರಾಡೋದು. ಅದನ್ನ ಬಿಟ್ಟು ಬೇರೆ ವಿಚಾರ ಮಾತನಾಡಬಾರದು. ಬೇರೆ ವಿಚಾರ ಮಾತನಾಡಲು ತುಂಬಾ ಟೈಂ ಇದೆ ಎಂದಿದ್ದಾರೆ. ನಮ್ಮ ಮುಂದೆ ಕೋವಿಡ್ ನಿಯಂತ್ರಣವೊಂದೆ ಈಗ ಇರುವ ಗುರಿ. ಇದನ್ನು ಬಿಟ್ಟು ನಾಯಕತ್ವ ಬದಲಾವಣೆ ಸೇರಿ ಬೇರೆ ಯಾವುದೇ ಗುರಿಗಳಿಲ್ಲ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು. ಬೆಂಗಳೂರಿನ ಲಯನ್ಸ್ ಕ್ಲಬ್, ಫ್ಯಾಮಿಲಿ ಆಂಡ್ ಫ್ರೆಂಡ್ಸ್ ಆಫ್ ಇಂಡಿಯಾ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ಕೊರೊನಾ ಸೋಂಕಿತರಿಗಾಗಿ ನೀಡಲಾಗುತ್ತಿರುವ ಆಕ್ಸಿಜನ್ ಸೌಲಭ್ಯ ಅಳವಡಿಸಿದ ಉಚಿತ ಬಸ್ ಸೇವೆಗೆ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ಚಾಲನೆ ನೀಡಿದರು. : – -- –- - .